ಬಾಹ್ಯಾಕಾಶದಿಂದ ಭೂಮಿ ಮತ್ತು ಚಂದ್ರನ ಫೋಟೋ ಸೆರೆಹಿಡಿದ ‘ಆದಿತ್ಯ ಎಲ್1 ‘
ಬಾಹ್ಯಾಕಾಶದಿಂದ ಭೂಮಿ ಮತ್ತು ಚಂದ್ರನ ಫೋಟೋ ಸೆರೆಹಿಡಿದ ‘ಆದಿತ್ಯ ಎಲ್1 ‘
ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಸೂರ್ಯಯಾನ ಯಶಸ್ವಿ ಉಡಾವಣೆಯಾಗಿದ್ದು, ಇದೀಗ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆ ಬಾಹ್ಯಾಕಾಶದಿಂದ ಸೆಲ್ಫಿ ಹಂಚಿಕೊಂಡಿದೆ, ಸೂರ್ಯ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆ ಸೂರ್ಯನ ಕಕ್ಷೆಯತ್ತ ದಾಪುಗಾಲಿರಿಸಿದ್ದು, ಇದೀಗ ಮಾರ್ಗ ಮಧ್ಯೆಯೇ ಸೆಲ್ಫಿ ಕ್ಲಿಕ್ಕಿಸಿ ಭೂಮಿ, ಚಂದ್ರನ ಫೋಟೋ ರವಾನಿಸಿದೆ.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್‌ನಲ್ಲಿ ಆದಿತ್ಯ-ಎಲ್ 1 ಕ್ಲಿಕ್ ಮಾಡಿದ ಸೆಲ್ಫಿಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದೆ.ಚಂದ್ರಯಾನ 3 ಉಡಾವಣೆ ಮಾಡಿದ ತಿಂಗಳ ಅವಧಿಯೊಳಗೆ ಇಸ್ರೋ ಮತ್ತೊಂದು ಬಾಹ್ಯಾಕಾಶ ನೌಕೆ ಆದಿತ್ಯ ಎಲ್ 1 ಅನ್ನು ಉಡ್ಡಯನ ಮಾಡಿತ್ತು.ಭಾರತದ ಮಹತ್ವಾಕಾಂಕ್ಷೆಯ ‘ಸೂರ್ಯಯಾನʼ ಆದಿತ್ಯ L1 (Aditya L1 Mission) ಭೂಮಿಯ ಸುತ್ತ ಎರಡನೇ ಸುತ್ತನ್ನು ಮುಗಿಸಿದೆ. ಸೆಪ್ಟೆಂಬರ್ 5ರ ರಾತ್ರಿ 2.45ಕ್ಕೆ ಆದಿತ್ಯ ಎಲ್1 ಭೂಮಿಗೆ ಎರಡನೇ ಸುತ್ತು ಪೂರ್ಣಗೊಳಿಸಿತು. ಆದಿತ್ಯ L1 ಸೆಪ್ಟೆಂಬರ್ 10ರಂದು ರಾತ್ರಿ 2:30ಕ್ಕೆ ಮೂರನೇ ಕಕ್ಷೆಯನ್ನು ಪೂರ್ಣಗೊಳಿಸಲಿದೆ ಎಂದು ಇಸ್ರೋ ತಿಳಿಸಿದೆ.
ಆದಿತ್ಯ-ಎಲ್ 1, ಇಂದು ಭೂಮಿಯ ಚಿತ್ರಗಳನ್ನು ಕಳುಹಿಸಿದ್ದು, ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಗೆ ಹೋಗುತ್ತಿರುವಾಗ ಚಂದ್ರ ಮತ್ತು ಭೂಮಿಯ ಚಿತ್ರಗಳನ್ನು ಸೆರೆಹಿಡಿದಿದೆ.