ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ವತಿಯಿಂದ 8 ನೇ ವರ್ಷದ ಮೊಸರು ಕುಡಿಕೆ ಉತ್ಸವ
ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ವತಿಯಿಂದ 8 ನೇ ವರ್ಷದ ಮೊಸರು ಕುಡಿಕೆ ಉತ್ಸವ
ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 8 ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.7 ರಂದು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಶ್ರೀ ಕೃಷ್ಣ ಭಟ್ ಮುಂಡ್ಯ ವಹಿಸಿದ್ದರು.
ಮೊಸರು ಕುಡಿಕೆ ಉತ್ಸವವು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಕೃಷ್ಣ ವೇಷದಾರಿ ಪುಟಾಣಿಗಳಿಂದ ಬೃಹತ್ ಮೆರವಣಿಗೆಯಿಂದ ಕಾರ್ಯಕ್ರಮ ಆರಂಭಗೊಂಡು ಪೇಟೆಯಲ್ಲಿ ಅಟ್ಟಿ ಮಡಿಕೆ ಹೊಡೆಯುದರೊಂದಿಗೆ ಮೊಸರು ಕುಡಿಕೆ ಉತ್ಸವ ನಡೆಯಿತು. ಮತ್ತು ಕಬಾತ್ ಹೊಡೆಯುವ ಸ್ಪರ್ಧೆಯು ಬಹಳ ಸಡಗರ ದಿಂದ ನಡೆಯಿತು.
ಕಬಾತ್ ಸ್ಪರ್ಧೆಯಲ್ಲಿ ವಿಜೇತರಾದ ಕಡಬ ವಿಷ್ಣು ಫ್ರೆಂಡ್ಸ್ ಇವರಿಗೆ ಹಿಂದೂ ಮುಂಖಡ ಅರುಣ್ ಕುಮರ್ ಪುತ್ತಿಲ ಬಹುಮಾನ ವಿತರಿಸಿದರು.
ಜಾರು ಕಂಬ ಸ್ಪಧೆಯಲ್ಲಿ ಸುಳ್ಯ ಪದವಿನ ಸಂತು ಬಹುಮಾನವನ್ನು ಪಡೆದುಕೊಂಡರು.ಹಾಗೂ ಅಟ್ಟಿ ಮಡಿಕೆ ಒಡೆಯುವ ಸ್ಪಧೆಯಲ್ಲಿ ಭಾಗವಹಿಸಿದ ತಂಡಗಳಿಗೆ ಸ್ಮರಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ಯುವ ಉದ್ಯಮಿ ಸಹಜ್ ರೈ ಬಳಜ್ಜ, ಡಾ.ಕುಮಾರ್ ಕತ್ರಿಬೈಲು,ಪಿ ಡಬ್ಲೂ ಡಿ ಕಾಂಟ್ರಾಕ್ಟರ್ ಸನತ್ ರೈ ಮೂಡಾಯೂರು, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಮಿತಿ ಸದಸ್ಯ ಅಶೋಕ್ ತ್ಯಾಗರಾಜ ನಗರ, ಹಿಂದೂ ಐಕ್ಯವೇದಿ ಕಾಸರಗೋಡು ತಾಲೂಕು ಕಾರ್ಯದರ್ಶಿ ಶಿವ ಪ್ರಸಾದ್ ವಾಲ್ತಾಜೆ, ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರಾದ ಪ್ರಜ್ವಲ್ ಮಡ್ಯಲಮಜಲು, ಕಾರ್ಯದರ್ಶಿ ಗೌರೀಶ್,ಶಿವರಾಮ್,ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುರಕ್ಷಾ ಸ್ವಾಗತಿಸಿ, ನಿಶಾಂತ ವಂದಿಸಿದರು ಹಾಗೂ ರಾಜೇಶ್ ಪಂಚೋಡಿ ಚಿನ್ಮಯ್ ರೈ ಮತ್ತು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಸಹಕರಿಸಿದರು.