ಸುಳ್ಯ : ಪದವಿಪೂರ್ವ ಕಾಲೇಜುಗಳ 2023-24 ರ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಉದ್ಘಾಟನೆ
ಸುಳ್ಯ : ಪದವಿಪೂರ್ವ ಕಾಲೇಜುಗಳ 2023-24 ರ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಉದ್ಘಾಟನೆ
2023-24 ರ ಸುಳ್ಯ ಪದವಿಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಕರ್ನಾಟಕ ಸರ್ಕಾರ, ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಸುಳ್ಯ (ಕಾಲೇಜು ವಿಭಾಗ) ಇದರ ಸಹಭಾಗಿತ್ವದಲ್ಲಿ ನಡೆಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಆದರೆ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಲ್ಲಿ ಭಾಗವಹಿಸುವುದು ಮುಖ್ಯ ಎಂದರು. ಕ್ರೀಡಾಕೂಟದಲ್ಲಿ ಭಾಗವಹಿಸಲು ಆಗಮಿಸಿದ ತಂಡಕ್ಕೆ ಹಾಗೂ ಶಾಲಾ ಸಂಘಟಕರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರವೀತಾ ಪ್ರಕಾಶ್, ಶರೀಫ್ ಕಂಠಿ, ವಿನಯ್ ಕುಮಾರ್ ಕಂದಡ್ಕ, ಎನ್ ಎ ರಾಮಚಂದ್ರ, ಶೇರ ಕೊಟ್ಯಾಪ್ಪ ಪೂಜಾರಿ, ಶಾಂತಿ, ಎಂ ವೆಂಕಪ್ಪ ಗೌಡ, ಜ್ಯೋತಿ, ಪದ್ಮನಾಭ, ಚಿದಾನಂದ, ಅಬ್ದುಲ್ ಸಮದ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.