• 15 ಮಾರ್ಚ್ 2025

ಮಂಗಳೂರು ವಿಮಾನ ನಿಲ್ದಾಣ ಸಂಪೂರ್ಣ ಅದಾನಿಗೆ

 ಮಂಗಳೂರು ವಿಮಾನ ನಿಲ್ದಾಣ ಸಂಪೂರ್ಣ ಅದಾನಿಗೆ
Digiqole Ad

ಮಂಗಳೂರು ವಿಮಾನ ನಿಲ್ದಾಣ ಸಂಪೂರ್ಣ ಅದಾನಿಗೆ 

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವು ಅಕ್ಟೋಬರ್ 31ರಿಂದ ಸಂಪೂರ್ಣವಾಗಿ ಅದಾನಿ ಸಮೂಹಕ್ಕೆ ಹಸ್ತಾಂತರಗೊಳ್ಳಲಿದ್ದು, ಆ ಬಳಿಕ ವಿಮಾನ ನಿಲ್ದಾಣದ ಹಣಕಾಸು, ಮಾನವ ಸಂಪನ್ಮೂಲ, ಆಡಳಿತ, ವಾಣಿಜ್ಯ, ಅಗ್ನಿಶಾಮ ಹಾಗೂ ಟರ್ಮಿನಲ್ ವಿಭಾಗವನ್ನು ಅದಾನಿ ಸಮೂಹ ನಿರ್ವಹಿಸಲಿದೆ.

ಮಂಗಳೂರು ವಿಮಾನ ನಿಲ್ದಾಣ ದ ಬಳಿಕ ದೇಶದ 6 ವಿಮಾನ ನಿಲ್ದಾಣಗಳು ಈಗ ಆದಾನಿ ಗ್ರೂಪ್ ತೆಕ್ಕೆಗೆ ಸೇರಿದೆ. ಇನ್ನುಮುಂದೆ ಮಂಗಳೂರಿನಿಂದ ವಿಮಾನಗಳ ಓಡಾಟ ಎಲ್ಲವೂ ಅದಾನಿ ಗ್ರೂಪ್ ಮೂಲಕವೇ ನಡೆಯಲಿದೆ.

ವಿಮಾನ ಸಂಚಾರ ನಿಯಂತ್ರಣ(ಎಟಿಸಿ), ಕಾರ್ಗೊ ಹಾಗೂ ಸಿಎನ್ಎಸ್ ವಿಭಾಗವನ್ನು ಮಾತ್ರ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಿಸಲಿದೆ. ಒಪ್ಪಂದದ ಪ್ರಕಾರ, ಮುಂದಿನ 3 ವರ್ಷ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಮೂಹ ಆಡಳಿತವನ್ನು ಜಂಟಿಯಾಗಿ ನಿರ್ವಹಿಸಲಿದೆ.ಇಡೀ ವಿಮಾನ ನಿಲ್ದಾಣ ಆದಾನಿ ಗ್ರೂಪ್ ಪಾಲಾದರೂ ಹೆಸರಿನಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ಲ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಹೆಸರು ಇರಲಿದೆ ಎಂದು ಆದಾನಿ ಗ್ರೂಪ್ ಸ್ಪಷ್ಟಪಡಿಸಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ