• 19 ಮಾರ್ಚ್ 2025

ಮಂಗಳೂರು ದಸರಾ: ದೈವಗಳ ಸ್ತಬ್ಧ ಚಿತ್ರಕ್ಕಿಲ್ಲ ಅವಕಾಶ

 ಮಂಗಳೂರು ದಸರಾ: ದೈವಗಳ ಸ್ತಬ್ಧ ಚಿತ್ರಕ್ಕಿಲ್ಲ ಅವಕಾಶ
Digiqole Ad

ಮಂಗಳೂರು ದಸರಾ: ದೈವಗಳ ಸ್ತಬ್ಧ ಚಿತ್ರಕ್ಕಿಲ್ಲ ಅವಕಾಶ

ವಿಶ್ವ ವಿಖ್ಯಾತ ಮಂಗಳೂರು ದಸರಾಕ್ಕೆ ಕುದ್ರೋಳಿ ಸಜ್ಜಾಗುತ್ತಿದೆ. ಈ ಬಾರಿಯ ದಸರಾ ಮೆರವಣಿಗೆ ಅಕ್ಟೋಬರ್ 25ರಂದು ನಡೆಯಲಿದ್ದು, ತುಳುನಾಡಿನ ದೈವಗಳ ಟ್ಯಾಬ್ಲೆ ಅಥವಾ ಸ್ತಬ್ಧಚಿತ್ರವನ್ನು ಪ್ರದರ್ಶಿಸುವುದಕ್ಕೆ ಅವಕಾಶವಿಲ್ಲ ಎಂದು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ತಿಳಿಸಿದ್ದಾರೆ.ಮೆರವಣಿಗೆಯ ಟ್ಯಾಬ್ಲೊಗಳಲ್ಲಿ ಯಾವುದೇ ಜಾತಿ, ಮತ ಸಮುದಾಯ, ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು.ದೈವಗಳ ಬಗ್ಗೆ ಅಪಾರ ನಂಬಿಕೆಯಿದ್ದು, ಭಕ್ತರ ಈ ನಂಬಿಕೆಗೆ ಘಾಸಿಯಾಗುವಂತಹ ಕಾರ್ಯ ಆಗಬಾರದು. ದೈವಗಳನ್ನು ಅಣಕಿಸುವ ಟ್ಯಾಬ್ಲೊಗಳು ಬಂದರೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಹಾಗೂ ಇದನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿರುವುದಾಗಿ ಹೇಳಿದರು. ಮುಖ್ಯವಾಗಿ ತುಳುನಾಡಿನ ದೈವ ದೇವರಗಳನ್ನು ಅವಹೇಳನ ಮಾಡುವ ಸ್ತಬ್ಬ ಚಿತ್ರಗಳಿಗೆ ಅವಕಾಶ ಇಲ್ಲ ಎಂದರು.

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ