• 20 ಮಾರ್ಚ್ 2025

ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿ!

 ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿ!
Digiqole Ad

ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿ!

‘ಪೆಪ್ಪರ್ ಎಕ್ಸ್’ ಮೆಣಸು ವಿಶ್ವದ ಹಾಟೆಸ್ಟ್ ಮೆಣಸು ಎಂದು ಗಿನ್ನಿಸ್ ವಿಶ್ವದಾಖಲೆ ಪಡೆದುಕೊಂಡಿದೆ. ಪೆಪ್ಪರ್ ಎಕ್ಸ್ ಕಾಳುಮೆಣಸು ಖಾರ ಮಾತ್ರವಲ್ಲದೆ ಆಕಾರದಲ್ಲಿಯೂ ವಿಭಿನ್ನವಾಗಿದೆ. ಪ್ರಪಂಚದಾದ್ಯಂತ ಹಲವಾರು ರೀತಿಯ ಮೆಣಸಿನಕಾಯಿಗಳಿವೆ. ಆದರೆ ಈ ಪೆಪ್ಪರ್ ಎಕ್ಸ್ ಅವೆಲ್ಲವನ್ನೂ ಹಿಂದಕ್ಕೆ ತಳ್ಳಿ ಹೊಸ ದಾಖಲೆ ಸೃಷ್ಟಿಸಿದೆ. ಇಲ್ಲಿಯವರೆಗೆ, ಕೆರೊಲಿನಾ ರೀಪರ್ ಚಿಲ್ಲಿ ಖಾರವಾದ ಮೆಣಸಿನಕಾಯಿ ಆಗಿದ್ದು, ಅದನ್ನು ಮೆಟ್ಟಿ ನಿಲ್ಲುವ ಮೂಲಕ ಗಿನ್ನಿಸ್ ದಾಖಲೆಯನ್ನೂ ನಿರ್ಮಿಸಿದೆ ಈ ಮೆಣಸಿನ ಕಾಯಿ. ಕೆರೊಲಿನಾ ರೀಪರ್ ಅನ್ನು ತನ್ನ ಸ್ನೇಹಿತ ಮಿಚ್ ಗ್ಯಾನ್ ಕಳುಹಿಸಿದ ಮೆಣಸಿನಕಾಯಿಗಳೊಂದಿಗೆ ಕ್ರಾಸ್-ಬ್ರೆಡ್ ಮಾಡಿದ್ದು, ಅದುವರೆಗೆ ಒಂದೇ ಮೆಣಸಿನಕಾಯಿಯಾಗಿದ್ದ ಕೆರೊಲಿನಾ ಮೆಣಸಿನಕಾಯಿಗಿಂತ ಖಾರವಾದ ಮೆಣಸಿನಕಾಯಿಯನ್ನು ಕಂಡುಕೊಂಡರು. ಈ ಪ್ರಯೋಗವನ್ನು ಹತ್ತು ವರ್ಷಗಳ ಕಾಲ ಮಾಡಿದ್ದು, ಕೊನೆಗೆ ಅವರು ಪೆಪ್ಪರ್ ಎಕ್ಸ್ ಅನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆರೊಲಿನಾ ಪೆಪ್ಪರ್​​ಗಿಂದ ಖಾರವಾಗಿದೆ. ಈ ಮೆಣಸಿನಕಾಯಿಗಳನ್ನು ಮಾರಾಟ ಮಾಡಲಾಗುವುದು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ