ನಾ ನಿಂತಿದ್ದೇನೆ, ನೀನಿನ್ನೂ ನಿಂತಿಲ್ಲ….
ನಾ ನಿಂತಿದ್ದೇನೆ, ನೀನಿನ್ನೂ ನಿಂತಿಲ್ಲ….
ಜಗಪ್ರಸಿದ್ಧ ವ್ಯಕ್ತಿ ಗೌತಮ ಬುದ್ಧರದು ನಮಗೆಲ್ಲರಿಗೂ ತಿಳಿದಿರುವ ಅದ್ಭುತ ವ್ಯಕ್ತಿತ್ವ. ಅವರ ಅಹಿಂಸ ತತ್ವದಿಂದ ಇಡೀ ಜಗತ್ತಿನ ಮನಗಳಲ್ಲಿ ಮನೆ ಮಾಡಿದವರು, ಅದೆಷ್ಟೋ ಹಿಂಸಾಚಾರಿಗಳನ್ನು ತಮ್ಮ ಹರಿತವಾದ ಮಾತುಗಳಿಂದಲೇ ತಿದ್ದಿದ ಮಹಾನ್ ವ್ಯಕ್ತಿತ್ವ ಅವರದು. ಅದಕ್ಕೊಂದು ಸಣ್ಣ ಉದಾಹರಣೆ ನಿಮ್ಮ ಮುಂದೆ.
ಒಂದು ದಿನ ಬುದ್ಧರು ಹೀಗೆಯೇ ಕಾಡಿನೊಳಗೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ಅಲ್ಲಿಯೇ ಇದ್ದಂಥಹ ಪಾದಚಾರಿಗಳು ಕಕ್ಕಾ ಬಿಕ್ಕಿಯಾಗಿ ಓಡುತ್ತಿದ್ದರು.
ಈ ದ್ರಶ್ಯವನ್ನು ಕಂಡ ಬುದ್ಧನು ಏಕೆ ಓಡುತ್ತಿರುವರೆಂದು ವಿಚಾರಿಸಿದಾಗ ಆಶ್ಚರ್ಯಗೊಳ್ಳುತ್ತಾರೆ. ವಿಷಯವೇನೆಂದರೆ ಅದೇ ಕಾಡಿನಲ್ಲಿ ಅಂಗುಲಿಮಾಳ ಅನ್ನುವ ರಾಕ್ಷಸ ಅಲ್ಲಿನ ಜನಗಳನ್ನು ಕೊಂದು ಸಾಕ್ಷಿಗಾಗಿ ಅವರ ಕಿರುಬೆರಳುಗಳನ್ನು ಕೊರಳಿಗೆ ಮಾಲೆಯನ್ನಾಗಿ ಧರಿಸುತ್ತಿದ್ದ. ಹೀಗಾಗಿ ತಾವು ಮುಂದೆ ಸಾಗಿದರೆ ನಿಮ್ಮನ್ನು ಸಾಯಿಸಬಹುದು ಎಂದು ಎಚ್ಚರಿಕೆ ನೀಡುತ್ತಾರೆ. ಇದನ್ನು ಕೇಳಿದ ಬುದ್ಧನ ಮುಖದಲ್ಲಿ ನಗು. ಅಲ್ಲದೆ ಮುಂದೆ ಸಾಗಲು ಮುಂದಾಗುತ್ತಾರೆ. ಅಂದುಕೊಂಡ ಹಾಗೆ ಅಂಗುಲಿಮಾಳ ಎದುರಿಗೆ ಸಿಗಲು ಬುದ್ಧನು ರಾಕ್ಷಸನಿಗೆ ಮುಮ್ಮುಖವಾಗಿ ಚಲಿಸಲು ಆರಂಭಿಸುತ್ತಾರೆ. ಇದನ್ನು ಕಂಡು ಅಂಗುಲಿಮಾಳ ದಿಗ್ಬ್ರಮೆಗೊಳ್ಳುವನು. ಹೆದರದೆ ಮುಗುಳ್ನಗುತ್ತಾ ಹತ್ತಿರತ್ತಿರ ಬರುವ ಬುದ್ಧನನ್ನು ಕಂಡು ತಾನೇ ಹೆದರಿಕೊಂಡು ನಿಲ್ಲಲ್ಲಿ¡.. ಎಂದು ಹೇಳುವನು. ಆಗ ಬುದ್ಧನು ” ನಾ ನಿಂತೆ ಇರುವೆ ಅಂಗುಲಿಮಾಳ. ಸರ್ವದಾ ಸರ್ವ ಪ್ರಾಣಿಗಳಲ್ಲಿಯು ನಾನು ದಂಡವನ್ನು ಇಳಿಸಿದ್ದೇನೆ. ನೀನಿನ್ನೂ ಪ್ರಾಣಿ, ಮಾನವರನ್ನು ಕೊಲ್ಲುತ್ತಲೇ ಇದ್ದೀಯೇ.. ಆದ್ದರಿಂದ ನಾನು ಹೀಗೆ ನಿಂತಿದೀನಿ ನೀನು ಹೀಗೆ ನಿಂತಿಲ್ಲ. ” ಎಂದು ಅಹಿಂಸ ಪ್ರವಚನ ನೀಡುತ್ತಾ ಅವನಲ್ಲಿದ್ದ ಕೆಟ್ಟ ಹವ್ಯಾಸಗಳನ್ನು ತಿದ್ದಿ ಉತ್ತಮ ದಾರಿಯೆಡೆ ಸಾಗುವಂತೆ ಮಾಡಿದ ಕೀರ್ತಿ ಗೌತಮ ಬುದ್ಧರದು.