• 20 ಮಾರ್ಚ್ 2025

ಮನಸ್ಸು ಕರಗುವ ದೃಶ್ಯ!:

 ಮನಸ್ಸು ಕರಗುವ ದೃಶ್ಯ!:
Digiqole Ad

ಮನಸ್ಸು ಕರಗುವ ದೃಶ್ಯ :

ಸಾಮಾಜಿಕ ಜಾಲತಾಣಗಳಲ್ಲಿ ಬದುಕು ಬದಲಿಸಬಲ್ಲ ಚಿತ್ರ ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವೊಂದು ಲಗಾಮಿಲ್ಲದೆ ಹರಿದಾಡುತ್ತಿದೆ. ಈ ದೃಶ್ಯವನ್ನು ಸೆರೆಹಿಡಿದ ಛಾಯಾಗ್ರಾಹಕನಿಗಂತೂ ವ್ಯಾಪಕ ಮೆಚ್ಚುಗೆ ಸಿಗುತ್ತಿದೆ.
ಅಷ್ಟಕ್ಕೂ ಆ ಚಿತ್ರದಲ್ಲಿ ಅಂಥಹದೇನಿದೆ? ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ಇಷ್ಟೊಂದು ವೇಗವಾಗಿ ಹರಿದಾಡುತ್ತಿರಲು ಕಾರಣವಾದರು ಏನೆಂದು ತಿಳಿಯಲು ಇಚ್ಛೆಹಿಸುವಿರಾ?
ಈ ಒಂದು ಅಪರೂಪದ ದೃಶ್ಯವನ್ನು ಸೆರೆ ಹಿಡಿದ ಛಾಯಾಗ್ರಾಹಕನಿಗೆ ಈ ಚಿತ್ರಣ ನಿಮ್ಮ ಕ್ಯಾಮರಾದಲ್ಲಿ ಹೇಗೆ ತೆಗೆದಿದ್ದೀರಿ ಎಂದು ಕೇಳಿದಾಗ.. ಅವರ ಉತ್ತರ ಹೀಗೆ ಉತ್ತರಿಸುತ್ತಾರೆ. ” ಒಂದು ಚಿರತೆಯು ತಾಯಿ ಜಿಂಕೆ ಹಾಗೂ ತನ್ನ ಎರಡು ಮರಿಗಳನ್ನು ಆಹಾರಕ್ಕಾಗಿ ಬೆನ್ನುಹಟ್ಟಿತ್ತು. ತಾಯಿ ಜಿಂಕೆ ಚಿರತೆಗಿಂತ ವೇಗವಾಗಿಯೇ ಓಡುತ್ತಿತ್ತು. ಆದರೆ ಅದರ ಮರಿಗಳಿಗೆ ವೇಗವಾಗಿ ಓಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ತನ್ನ ಎರಡು ಮರಿಗಳನ್ನು ಉಳಿಸಿಕೊಳ್ಳಲು ತನ್ನನ್ನು ತಾನೇ ಚಿರತೆಗೆ ಅರ್ಪಿಸಿಕೊಂಡಳು… ಇನ್ನೇನು ಚಿರತೆಗಳು ತನ್ನನ್ನು ತಿನ್ನುವ ಹಂತದಲ್ಲಿದ್ದಾಗ ತನ್ನ ಮಕ್ಕಳು ಸುರಕ್ಷಿತವಾಗಿ ಓಡುತ್ತಿವೆಯಲ್ಲ ಎಂಬ ಸಮಾಧಾನಕರ ನೋಟವನ್ನು ಈ ಫೋಟೋ ತೋರಿಸುತ್ತದೆ.
ತಾಯಿಯು ಸುಲಭವಾಗಿ ಮರಿಗಳನ್ನು ಬಿಟ್ಟು ಓಡಿ ಜೀವ ಉಳಿಕೊಳ್ಳಬಹುದಿತ್ತು. ಆದರೆ ಅದು ತನ್ನ ಮಕ್ಕಳಿಗಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದಳು.”

ತಾಯಿಯೇ ಹಾಗೆ ಅಲ್ಲವೇ, ತ್ಯಾಗಮಯಿ….

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ