ಉಚಿತ ಪ್ರಯಾಣ ಬಸ್ ನಿಲ್ಲತ್ತಾ?
ಉಚಿತ ಬಸ್ ಪ್ರಯಾಣ ನಿಲ್ಲುತ್ತಾ?
ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಕಳೆದ ಚುನಾವಣೆ ವೇಳೆ ಮಹಿಳೆಯರಿಗಾಗಿ ಶಕ್ತಿ ಯೋಜನೆಯನ್ನು ಘೋಷಣೆ ಮಾಡಿದ್ದು, ತಮ್ಮ ಪಕ್ಷ ಗೆದ್ದ ನಂತರ ಮಾತು ಕೊಟ್ಟಂತೆ ರಾಜ್ಯದಲ್ಲಿ ಉಚಿತ ಬಸ್ ಪಯಾಣ ವ್ಯವಸ್ಥೆ ಜಾರಿ ಮಾಡಿದರು. ಅಂದುಕೊಂಡ ಹಾಗೆ ರಾಜ್ಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಇಂದಿಗೂ ಬಸ್ ನಲ್ಲಿ ಪ್ರಯಾಣಿಸುವ ಸಂಖ್ಯೆ ಸ್ಥಿರವಾಗಿದೆ. ರಾಜ್ಯದ ಸಿ ಎಂ ಶಕ್ತಿ ಯೋಜನೆಗೆಗಾಗಿ 2800ಕೋಟಿ ಮೀಸಲಿಟ್ಟಿದ್ದು, ನವಂಬರ್ 5ರವರೆಗಿನ ಮಹಿಳೆಯರ ಉಚಿತ ಪ್ರಯಾಣ ಮೌಲ್ಯ 2143ಕೋಟಿಗೆ ಮುಟ್ಟಿದೆ. ಈ ವರ್ಷ ಮುಗಿಯುವ 5ತಿಂಗಳ ಮೊದಲೇ ಬಜೆಟ್ ನಲ್ಲಿ ಮೀಸಲಿಟ್ಟ ಹಣ ಖಾಲಿಯಾಗ್ತಾ ಇದ್ದು, ಡಿಸಂಬರ್ ವರೆಗೆ ಮಾತ್ರ ಉಪಯೋಗಿಸುವಷ್ಟು ಬರಬಹುದು ಎಂದು ಸ್ವತಃ ಸಾರಿಗೆ ನಿಗಮಗಳೇ ಇದನ್ನು ಸಮರ್ಥಿಸಿಕೊಂಡಿದೆ. ಅಲ್ಲದೇ ಶಕ್ತಿ ಯೋಜನೆಯಡಿ ಆರಂಭಿಸಿದ ಉಚಿತ ಬಸ್ನಲ್ಲಿ ಮಹಿಳೆಯರ ಪ್ರಯಾಣ ಸ್ವಲ್ಪ ಸಮಯದಲ್ಲಿ ಕಡಿಮೆಯಾಗಬಹುದು ಎಂದು ಊಹಿಸಿದ್ದೆವು. ಆದರೆ ಅಂದುಕೊಂಡಂತೆ ಆಗಲಿಲ್ಲ. ಮಹಿಳೆಯರ ಪ್ರಯಾಣ ಮೊದಲಿನಂತೆ ಸ್ಥಿರವಾಗಿದೆ. ಸರ್ಕಾರವು ಈ ಯೋಜನೆಗೆ ಮೀಸಲಿಟ್ಟ ಹಣ ಇನ್ನು ಹೆಚ್ಚು ಮಾಡಬೇಕೆಂದು ಕೆ ಎಸ್ ಆರ್ ಟಿ ಸಿ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.