ಜೈ ತುಳುನಾಡ್ ವತಿಯಿಂದ ‘ಕೋಟಿಗೀತಾಲೇಖನಯಜ್ಞ’
ಜೈ ತುಳುನಾಡ್ ವತಿಯಿಂದ ಕೋಟಿಗೀತಾಲೇಖನಯಜ್ಞ…..
ಒಡಿಪು : ಶ್ರೀ ಪುತ್ತಿಗೆ ಮಠದ ಭಾವಿ ಪರ್ಯಾಯ ಪೀಠಾಧಿಪತಿ ಪರಮಪೂಜ್ಯ ಶ್ರೀ ಶ್ರೀ ಡಾ. ಸುಗುಣೇಂದ್ರ ತೀರ್ಥ ಸ್ವಾಮಿಗಳ ಸಹಕಾರದೊಂದಿಗೆ ಜೈ ತುಳುನಾಡ್ ಸಂಘದ ಎಲ್ಲಾ ಸದಸ್ಯರು ಜೊತೆಗೂಡಿ ‘ ಬಲೇ ತುಳು ಲಿಪಿಟ್ ಭಗವದ್ಗೀತೆ ಬರೆಕ’ ‘ಕೋಟಿಗೀತಾಲೇಖನಯಜ್ಞ ‘ ಎಂಬ ಹೊಸ ವಿಷಯವನ್ನು ಆರಂಭಿಸಲಿದ್ದಾರೆ.
ಎಲ್ಲಾ ಭಾಷೆಯಲ್ಲೂ ಭಗವದ್ಗೀತೆ ಶ್ಲೋಕಗಳನ್ನು ಬರೆಯುತ್ತಿದ್ದು ಇದೀಗ ತುಳು ಲಿಪಿಯಲ್ಲೂ ಭಗವದ್ಗೀತೆ ಬರೆದು ಒಡಿಪು ಶ್ರೀ ಕೃಷ್ಣನಿಗೆ ಅರ್ಪಣೆ ಮಾಡಲು ನಿರ್ಧರಿಸಿದ್ದಾರೆ. ಗೀತೆಯನ್ನು ತುಳು ಲಿಪಿಯಲ್ಲಿ ಬರೆದು ಮುಗಿಸಲು ಡಿಸೆಂಬರ್ 2024ರವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ. ಅಲ್ಲದೇ ಗೀತೆಯನ್ನು ಬರೆಯಲು ಸ್ವತ ಅವರೇ ಪುಸ್ತಕ ನೀಡುತ್ತಿದ್ದು, ಬರೆದ ನಂತರ ಬರೆದವರಿಗೆ ಹಿಂತಿರುಗಿಸುತ್ತಾರೆ. ಇದರ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಅಥವಾ ಸಂದೇಶ ಗಳನ್ನು ಕಳುಹಿಸುವ ಮೂಲಕ ಸಂಪರ್ಕಿಸಬಹುದು.
95335621658/9901730239