ಯಶಸ್ವಿಯಾಗಿ ನಡೆದ 1753ನೆಯ ಮದ್ಯವರ್ಜನ ಶಿಬಿರ
ಯಶಸ್ವಿಯಾಗಿ ನಡೆದ 1753ನೆಯ ಮದ್ಯವರ್ಜನ ಶಿಬಿರ
ಸುಳ್ಯ ಅಜ್ಜಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ 1753ನೇ ಮದ್ಯವರ್ಜನ ಶಿಬಿರ ನಡೆಯಿತು,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಹಾಗು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು.ಇದರ ಆಶ್ರಯದಲ್ಲಿ 1753ನೆ ಮದ್ಯ ವರ್ಜನ ಶಿಬಿರ ಯಶಸ್ವಿಯಾಗಿ ನಡೆಯಿತು.
ಕುಡಿತಕ್ಕಾಗಿ ಜೀವ ಎಂಬಂತೆ ಜೀವಿಸುವ ರೋಗಿಗೆ ಸೂಕ್ತ ಪ್ರೇರಣೆ, ಮಾರ್ಗದರ್ಶನ, ಚಿಕಿತ್ಸೆ ನೀಡುವುದು ಸಮಾಜದ ಕರ್ತವ್ಯವಾಗಿದೆ. ಸಾಮಾಜಿಕ ಪಿಡುಗಾದ ಮದ್ಯ ವ್ಯಸನವನ್ನು ಸಮಾಜದ ಸಂಘ ಸಂಸ್ಥೆಗಳ ಭಾಗವಹಿಸುವಿಕೆಯ ಮೂಲಕ ಹಾಗೂ ವೈದ್ಯಕೀಯ ಚಿಕಿತ್ಸೆ ಮನೋರೋಗ ತಜ್ಞರ ಸಲಹೆ, ಮಾರ್ಗದರ್ಶನ ನೀಡಿ ರೋಗಿಯ ಸಮಸ್ಯೆಯಾದ ಒಬ್ಬಂಟಿತನದ, ಕೋಪ, ನಿರಾಶೆ, ಕೀಳರಿಮೆ ಮತ್ತು ಕೌಟುಂಜಕ ಸಮಸ್ಯೆಗಳನ್ನು ನಿವಾರಿಸುವುದು ಮತ್ತು ಕುಟುಂಬ ಹಾಗೂ ಸಮಾಜದಲ್ಲಿ ಸ್ಥಾನಮಾನ, ಗೌರವಗಳನ್ನು ಕಟ್ಟಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ,
ಇಂತಹ 1753 ನೇ ಮದ್ಯವರ್ಜನ ಶಿಬಿರವು ದಿನಾಂಕ 03-11-2023 ರಿಂದ 10.11.2023 ರವರೆಗೆ ಶ್ರೀ ಮಹಿಷಮರ್ದಿನಿ ದೇವಸ್ಥಾನ ಅಜ್ಜಾವರದಲ್ಲಿ ನಡೆಯಿತು. ಈ ಒಂದು ಪುಣ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು, ಎಂದು ಕಾರ್ಯಕ್ರಮದ ಮದ್ಯವರ್ಜನ ಶಿಬಿರದ ಕಾರ್ಯಕರ್ತ ಪದಾಧಿಕಾರಿಗಳು ತಿಳಿಸಿದರು.