ಶಬರಿಮಲೆ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ:
ಶಬರಿಮಲೆ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ:
ರಾಜ್ಯ ಸರ್ಕಾರವು ಶಬರಿಮಲೆ ಯಾತ್ರಾರ್ಥಿಗಳಿಗೆ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ, ರಾಜಹಂಸ ಬಸ್ಗಳ ಸೌಲಭ್ಯವನ್ನು ಒದಗಿಸಿದೆ. ಡಿಸಂಬರ್ 1ರಿಂದ ಈ ಕಾರ್ಯಾಚರಣೆ ಆರಂಭವಾಗಲಿದ್ದು, ಸಾರಿಗೆ ಇಲಾಖೆಯು ವೋಲ್ವೋ ಬಸ್ ಟಿಕೆಟ್ ದರವನ್ನು 1600ರೂ. ಹಾಗೂ ರಾಜಹಂಸ ಬಸ್ ಟಿಕೆಟ್ ದರವನ್ನು 940ರೂ. ಎಂದು ನಿಗದಿಪಡಿಸಿದೆ.
>>ವೋಲ್ವೋ ಪ್ರಯಾಣ ವಿವರ ಹೀಗಿದೆ :
*ಮಧ್ಯಾಹ್ನ 1.50ಕ್ಕೆ ಶಾಂತಿನಗರದಿಂದ ಹೊರಟು ಮರುದಿನ ಬೆಳಗ್ಗೆ 6.45ಕ್ಕೆ ನೀಲಕ್ಕಲ್ ತಲುಪಲಿದೆ.
*ಅದೇ ದಿನ ಸಂಜೆ 6ಗಂಟೆಗೆ ನೀಲಕ್ಕಲ್ ನಿಂದ ಹೊರಟು ಮರುದಿನ ಬೆಳಗ್ಗೆ 10ಗಂಟೆಗೆ ಬೆಂಗಳೂರು ತಲುಪಲಿದೆ.
>>ರಾಜಹಂಸ ಪ್ರಯಾಣ ವಿವರ ಹೀಗಿದೆ :
*ಮಧ್ಯಾಹ್ನ 1.00ಗಂಟೆಗೆ ಶಾಂತಿನಗರದಿಂದ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ನೀಲಕ್ಕಲ್ ತಲುಪಲಿದೆ.
*ಅದೇ ದಿನ ಸಂಜೆ 5ಗಂಟೆಗೆ ನೀಲಕ್ಕಲ್ ನಿಂದ ಹೊರಟು ಮರುದಿನ ಬೆಳಗ್ಗೆ 12ಗಂಟೆಗೆ ಬೆಂಗಳೂರು ತಲುಪಲಿದೆ.
ಅಲ್ಲದೇ ಸಾರಿಗೆ ಇಲಾಖೆಯಿಂದ ಯಾತ್ರಾರ್ಥಿಗಳಿಗೆ ಟಿಕೆಟ್ ನ್ನು ಮುಂಗಡವಾಗಿ ಕಾಯ್ದಿರಿಸಲು ಸ್ಕ್ಯಾನರ್ ಕೋಡ್ ನ್ನು ಸಹ ಪ್ರಕಟಿಸಲಾಗಿದೆ.