ಇಂದಿನಿಂದ ಚಳಿಗಾಲ ಸಂಸತ್ ಅಧಿವೇಶನ
ಇಂದಿನಿಂದ ಚಳಿಗಾಲ ಸಂಸತ್ ಅಧಿವೇಶನ
ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲ ಅಧಿವೇಶನ ಆರಂಭ ಆಗಲಿದ್ದು, ಬೆಳಗಾವಿಯಲ್ಲಿ ನಡೆಯುವ 12ನೇ ಅಧಿವೇಶನಕ್ಕೆಎಲ್ಲಾ ರೀತಿಯ ಸಿದ್ದತೆಗಳನ್ನ ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಸಂಪೂರ್ಣವಾಗಿ ಮಾಡಿಕೊಂಡಿದೆ. ಸುವರ್ಣ ವಿಧಾನಸೌಧದ ಒಂದು ಕಿಮೀ ವ್ಯಾಪ್ತಿಯಲ್ಲಿ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬರಗಾಲ, ವರ್ಗಾವಣೆ ದಂಧೆ, ಗ್ಯಾರಂಟಿ, ವಿದ್ಯುತ್ ಬವಣೆ, ಪರೀಕ್ಷಾ ಅಕ್ರಮ, ಕಮಿಷನ್ ಕಿರುಕುಳ, ಡಿಸಿಎಂ ವಿರುದ್ಧ ಸಿಬಿಐ ತನಿಖೆ ವಾಪಸ್ ಪಡೆದ ನಿರ್ಣಯ ಹೀಗೆ ಹತ್ತು ಹಲವು ವಿಷಯಗಳನ್ನು ಶಾಸನ ಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಕಿವಿಹಿಂಡಲು ಪ್ರತಿಪಕ್ಷ ಬಿಜೆಪಿ ತಯಾರಾಗಿದೆ.
ಇದೇ ವೇಳೆ ಪ್ರತಿಪಕ್ಷಗಳ ಆರೋಪಗಳಿಗೆ ಆಗಿಂದಾಗಲೇ ಸ್ಪಷ್ಟನೆ ನೀಡುವ ಮೂಲಕ ವಿಷಯ ವಿಸ್ತಾರ ತಡೆಯುವ ತಂತ್ರಗಾರಿಕೆ ನಡೆಸಿದ ಸಿದ್ದರಾಮಯ್ಯ, ಅಧಿವೇಶನದಲ್ಲೂ ಎದುರಾಗಲಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ತಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರ ಜೋಡಿಸಿಕೊಂಡಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಡಿ.6ರ ಬುಧವಾರದಂದು ‘ಇಂಡಿಯಾ’ ಮೈತ್ರಿಕೂಟದ ನಾಯಕರು ದೆಹಲಿಯಲ್ಲಿ ಸಭೆ ಸೇರಲಿದ್ದಾರೆ.
ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ಈಗಾಗಲೇ ಎರಡು ಸಾವಿರ ರೂಮ್ ಗಳು ಹಂಚಿಕೆಯಾಗಿದ್ದು ಅಲ್ಲೇ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ. ಚೀನಾ ವೈರಸ್ ಆತಂಕ ಹಿನ್ನೆಲೆ ಈ ಬಾರಿ ಸಚಿವರು ಶಾಸಕರು ಇರುವ ಹೋಟೆಲ್ಗಳಲ್ಲೇ ಒಂದೊಂದು ವೈದ್ಯರ ತಂಡ ನೇಮಕ ಜೊತೆಗೆ ಒಂದೊಂದು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಈ ಬಾರಿ ಒಟ್ಟು 17.5ಕೋಟಿ ವೆಚ್ಚದಲ್ಲಿ ಅಧಿವೇಶನ ನಡೆಯುತ್ತಿದೆ.