ಎಸ್ ಸಿ, ಎಸ್ ಟಿ ಸಮುದಾಯದ ಜನರಿಗೆ ಸಿಹಿ ಸುದ್ದಿ :
ಎಸ್ ಸಿ, ಎಸ್ ಟಿ ಸಮುದಾಯದ ಜನರಿಗೆ ಸಿಹಿ ಸುದ್ದಿ :
ಪುತ್ತೂರು : ಪುತ್ತೂರು ತಾಲೂಕಿನ ನಗರ ಸಭಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ಎಸ್ ಸಿ, ಎಸ್ ಟಿ ಹಾಗೂ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಅನುದಾನವನ್ನು ನೀಡಲಿದ್ದೇವೆ ಎಂದು ಪುತ್ತೂರಿನ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಈಗಾಗಲೇ ಮಾಹಿತಿ ಬಹಿರಂಗ ಪಡಿಸಿದ್ದಾರೆ.ಎಸ್ ಸಿ ಹಾಗೂ ಇತರೆ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಮನೆ ದುರಸ್ತಿ ಮಾಡಲು, ಅಂಗವಿಕಲರಿಗೆ ದ್ವಿಚಕ್ರ ವಾಹನ ಖರೀದಿ ಮಾಡಲು ಅನುದಾನ ಲಭ್ಯವಿದೆ ಎಂದು ತಿಳಿಸಿರುತ್ತಾರೆ. ಅಲ್ಲದೇ ಫಲಾನುಭವಿಗಳ ಆಯ್ಕೆಗಾಗಿ ಕೂಡಲೇ ಶಾಸಕರ ಕಛೇರಿಯನ್ನು ಭೇಟಿ ನೀಡುವಂತೆ ಸೂಚಿಸಲಾಗಿದೆ.