ಕಾಣಿಯೂರು ಯಕ್ಷಮಿತ್ರ ಬಳಗದಿಂದ ಶ್ರೀ ದೇವಿ ಲಲಿತೋಪಖ್ಯಾನ ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ
ಕಾಣಿಯೂರು ಯಕ್ಷಮಿತ್ರ ಬಳಗದಿಂದ ಶ್ರೀ ದೇವಿ ಲಲಿತೋಪಖ್ಯಾನ ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ
ಕಾಣಿಯೂರು ಯಕ್ಷಮಿತ್ರ ಬಳಗದ ವತಿಯಿಂದ ದಿನಾಂಕ 02-01-2024ರ ಮಂಗಳವಾರ ಸಂಜೆ 6-30ರಿಂದ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳ ಇವರಿಂದ ” ಶ್ರೀ ದೇವಿ ಲಲಿತೋಪಖ್ಯಾನ” ಎಂಬ ಯಕ್ಷಗಾನ ಬಯಲಾಟ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು
ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕಾಣಿಯೂರು ಮಠದ ಮೆನೇಜರ್ ಶ್ರೀ ನಿರಂಜನ ಆಚಾರ್ಯ ರವರು ಬಿಡುಗಡೆ ಗೊಳಿಸಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು .ಈ ಸಂದರ್ಭದಲ್ಲಿ ಯಕ್ಷಮಿತ್ರ ಬಳಗದ ಅಧ್ಯಕ್ಷರಾದ ಹರಿಪ್ರಸಾದ್ ರೈ ಕಾಣಿಯೂರು, ಸಂಚಾಲಕ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಕಾರ್ಯದರ್ಶಿ ನಾರಾಯಣ ಭಟ್, ಉಪಾಧ್ಯಕ್ಷ ಮೋನಪ್ಪ ಬಂಡಾಜೆ, ಜತೆ ಕಾರ್ಯದರ್ಶಿ ರಕ್ಷಿತ್ ಭಂಡಾರಿ ಪದಾಧಿಕಾರಿಗಳಾದ ಜಯಂತ.ವೈ ಚಾರ್ವಾಕ, ,ಡಾ.ಉದಯ ಕುಮಾರ್, ವಾಸುದೇವ ನಾಯ್ಕ್ ತೋಟ, ಪರಮೇಶ್ವರ ಅನಿಲ, ಜಯಂತ ಅಬೀರ ರಾಜೇಶ್ ಮೀಜೆ, ದಿನೇಶ್ ಪೈಕ, ರವೀಂದ್ರ ಅನಿಲ, ಪ್ರೀತಮ್ ಕಂಡೂರು, ಬಾಲಚಂದ್ರ ಅಬೀರ, ಸೀತಾರಾಮ ಅನಿಲ, ರಂಜಿತ್ ಅಬೀರ,ಪ್ರಗತ್ ರಾಜ್ ಬೈತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.