• 19 ಮಾರ್ಚ್ 2025

2023ನೇ ಸಾಲಿನ ಅರ್ಜುನ ಪ್ರಶಸ್ತಿ ಪ್ರಕಟ

Digiqole Ad

2023ನೇ ಸಾಲಿನ ಅರ್ಜುನ ಪ್ರಶಸ್ತಿ ಪ್ರಕಟ

ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ 2023ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ಇಂದು ಪ್ರಕಟಿಸಿದೆ .ಈ ವರ್ಷ ವಿವಿಧ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ 26 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗಿದೆ. ಬ್ಯಾಂಡ್ಮಿಂಟನ್​ ತಾರೆಗಳಾದ ಚಿರಾಗ್​ ಚಂದ್ರಶೇಖರ್​ ಶೆಟ್ಟಿ ಮತ್ತು ರಾಂಕಿ ರೆಡ್ಡಿ ಸಾತ್ವಿಕ್​ ಸಾಯಿ ರಾಜ್​ ಅವರು ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾದರೆ, ಕ್ರಿಕೆಟಿಗ ಮೊಹಮ್ಮದ್​ ಶಮಿ ಸೇರಿದಂತೆ 26 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2024ರ ಜನವರಿ 9ರಂದು ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಜ. 9ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಅರ್ಜುನ ಪ್ರಶಸ್ತಿ ವಿಜೇತ ಇತರ 25 ಕ್ರೀಡಾಪಟುಗಳು:

1. ಓಜಸ್ ಪ್ರವೀಣ್ ಡಿಯೋಟಾಲೆ (ಬಿಲ್ಲುಗಾರಿಕೆ)

2. ಅದಿತಿ ಗೋಪಿಚಂದ್ ಸ್ವಾಮಿ (ಬಿಲ್ಲುಗಾರಿಕೆ)

3. ಎಂ ಶ್ರೀಶಂಕರ್ (ಅಥ್ಲೆಟಿಕ್ಸ್‌)

4. ಪಾರುಲ್ ಚೌಧರಿ (ಅಥ್ಲೆಟಿಕ್ಸ್‌)

5. ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್)

6. ಆರ್ ವೈಶಾಲಿ (ಚೆಸ್‌)

7. ಮೊಹಮ್ಮದ್ ಶಮಿ (ಕ್ರಿಕೆಟ್)

8. ಅನುಷಾ ಅಗರವಾಲಾ (ಈಕೆ.ಸಿ.ಯನ್)

9. ದಿವ್ಯಾಕೃತಿ ಸಿಂಗ್ (ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್)

10. ದೀಕ್ಷಾ ದಾಗರ್ (ಗಾಲ್ಫ್)

11. ಕ್ರಿಶನ್ ಬಹದ್ದೂರ್ ಪಾಠಕ್ (ಹಾಕಿ)

12. ಪುಬ್ರಂಬಂ ಸುಶೀಲಾ ಚಾನು (ಹಾಕಿ)

13. ಪವನ್ ಕುಮಾರ್ (ಕಬಡ್ಡಿ)

14. ರಿತು ನೇಗಿ (ಕಬಡ್ಡಿ)

15. ನಸ್ರಿನ್ (ಖೋ ಖೋ)

16. ಪಿಂಕಿ (ಲಾನ್ ಬೌಲ್ಸ್)

17. ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್)

18. ಉಷಾ ಸಿಂಗ್ (ಶೂಟಿಂಗ್)

19. ಹರಿಂದರ್ ಪಾಲ್ ಸಿಂಗ್‌ ಸಂಧು (ಸ್ಕ್ಯಾಷ್)

20. ಅಹಿಕಾ ಮುಖರ್ಜಿ (ಟೇಬಲ್ ಟೆನಿಸ್)

21. ಸುನಿಲ್ ಕುಮಾ‌ರ್ (ಕುಸ್ತಿ)

22. ಆಂಟಿಮ್ (ಕುಸ್ತಿ)

23. ನೌರೆಮ್ ರೋಶಿಬಿನಾ ದೇವಿ (ಉಶು)

24. ಶೀತಲ್ ದೇವಿ (ಪ್ಯಾರಾ ಆರ್ಚರಿ)

25. ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ (ಅಂಧ ಕ್ರಿಕೆಟ್)

26. ಪ್ರಾಚಿ ಯಾದವ್ (ಪ್ಯಾರಾ ಕ್ಯಾನೋಯಿಂಗ್)

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ