ಶಬರಿಮಲೆ; ಇನ್ನು ಮುಂದೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಆನ್ ಲೈನ್ ಬುಕ್ಕಿಂಗ್;ಮಕರ ಜ್ಯೋತಿಯಂದು ದರ್ಶನಕ್ಕೂ ಮಿತಿ
ಶಬರಿಮಲೆ; ಇನ್ನು ಮುಂದೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಆನ್ ಲೈನ್ ಬುಕ್ಕಿಂಗ್;ಮಕರ ಜ್ಯೋತಿಯಂದು ದರ್ಶನಕ್ಕೂ ಮಿತಿ
ತಿರುವನಂತಪುರ ಜ.6: ಮಕರ ಜ್ಯೋತಿ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಹೊಸ ನಿಯಮವನ್ನು ಜಾರಿ ಮಾಡಿದೆ. ಶಬರಿಮಲೆಗೆ ಆಗಮಿಸುತ್ತಿರುವ ಭಕ್ತರು ದರ್ಶನಕ್ಕಾಗಿ ಜ.10ರಿಂದ ಸರತಿ ಸಾಲಿನಲ್ಲಿ ನಿಲ್ಲಲು, ದೇವಾಲಯದ ಪರಿಸರದಲ್ಲಿ ತಕ್ಷಣ ಮಾಡುವ ಬುಕ್ಕಿಂಗ್ ಗೆ ನಿರ್ಬಂಧ ವಿಧಿಸಿದೆ. ಇದಕ್ಕಾಗಿ ಮೊದಲೇ ಆನ್‌ಲೈನ್ ಬುಕಿಂಗ್ ಮಾಡಬೇಕೆಂಬ ನಿಯಮವನ್ನು ಕಡ್ಡಾಯಗೊಳಿಸಿದೆ. ಅಲ್ಲದೆ ಮಕರಜ್ಯೋತಿ ಕಾಣಿಸುವ ದಿನ ಆನ್‌ಲೈನ್ ಬುಕಿಂಗ್‌ಗೂ ಮಿತಿ ವಿಧಿಸಲಾಗಿದ್ದು, ಜ.14ರಂದು 50,000 ಮಂದಿಗೆ ಮಾತ್ರ ದರ್ಶನಕ್ಕೆ ಟಿಕೆಟ್ ಹಾಗೂ ಜ.15ರಂದು 40,000 ಮಂದಿಗೆ ಮಾತ್ರ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಅವಕಾಶವಿದೆ ಎಂಬುದಾಗಿ ದೇವಸ್ವಂ ಮಂಡಳಿ ಪ್ರಕಟಣೆಯಲ್ಲಿ ಹೇಳಿದೆ.