ಉತ್ತರಾಖಂಡ್ ಸರ್ಕಾರದಿಂದ UCC ಜಾರಿ ವರದಿಗೆ ಒಪ್ಪಿಗೆ
ಉತ್ತರಾಖಂಡ್ ಸರ್ಕಾರದಿಂದ UCC ಜಾರಿ ವರದಿಗೆ ಒಪ್ಪಿಗೆ
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ(UCC) ಜಾರಿಗೆ ತಜ್ಞರ ಸಮಿತಿ ಸಲ್ಲಿಸಿರುವ ವರದಿಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸರ್ಕಾರ ಅನುಮೋದನೆ ನೀಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ದೇಶದಲ್ಲಿ ಈಗಾಗಲೇ ಸಾಕಷ್ಟು ಚರ್ಚೆ,ವಿವಾದಕ್ಕೆ ಎಡೆ ಮಾಡಿರುವ UCC ಕಾಯ್ದೆ ಜಾರಿಗೆ ಸುಪ್ರೀಂ ನಿವೃತ್ತ ನ್ಯಾ.ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ತಜ್ಞರ ಸಮಿತಿ ನೀಡಿರುವ ಅಂತಿಮ ವರದಿ ಅಂಗೀಕಾರವಾಗಿದೆ. ನಾಳೆಯಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಅನುಮೋದನೆಯಾದರೆ ಯುಸಿಸಿ ಕಾನೂನು ಜಾರಿಗೊಳಿಸಿದ ಮೊದಲ ರಾಜ್ಯ ಉತ್ತರಾಖಂಡ್ ಆಗಲಿದೆ.