ಕೊಡೆಂಚಿಕಾರ್ ಸ್ವಾಮಿ ಕೊರಗತನಿಯ ದೈವದ ದೈವಸ್ಥಾನದಲ್ಲಿ 22ನೇ ವರ್ಷದ ಅದ್ದೂರಿಯ ನೇಮೋತ್ಸವ
ಕೊಡೆಂಚಿಕಾರ್ ಸ್ವಾಮಿ ಕೊರಗತನಿಯ ದೈವದ ದೈವಸ್ಥಾನದಲ್ಲಿ 22ನೇ ವರ್ಷದ ಅದ್ದೂರಿಯ ನೇಮೋತ್ಸವ
ಶ್ರೀ ಕೊರಗತನಿಯ ದೈವದ ದೈವಸ್ಥಾನ ಕೊಡೆಂಚಿಕಾರ್ ಪೇರಾಲು ಮಂಡೆಕೋಲು ಗ್ರಾಮ ಸುಳ್ಯ ತಾಲೂಕು ಇಲ್ಲಿ 22ನೇ ವರ್ಷದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ದಿನಾಂಕ 24.02.2024 ರಿಂದ ಬೆಳಗ್ಗೆ ಗಂಟೆ 8ಕ್ಕೆ ಗಣಪತಿ ಹವನ ಮತ್ತು ನಾಗಪೂಜೆ 10 ಗಂಟೆಗೆ ಶನಿ ಪೂಜೆ, ಕಲಶ ಸ್ನಾನ 11:00ಗೆ ಭಜನಾ ಕಾರ್ಯಕ್ರಮ ಮಧ್ಯಾಹ್ನ ಗಂಟೆ 12 ಗಂಟೆಗೆ ಮಹಾಪೂಜೆ ಪ್ರಸಾದ ವಿತರಣೆ ಒಂದು ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ 3 ಗಂಟೆಗೆ ಗುಳಿಗನಕೋಲ ಕೋಲ ನಡೆಯಲಿದ್ದು ನಂತರ ಪ್ರಸಾದ ವಿತರಣೆ ನಡೆಯಲಿದೆ ರಾತ್ರಿ 10 ಗಂಟೆಗೆ ಮಹಾಪೂಜೆ ಮತ್ತು ಕೊರಗಜ್ಜ ಸ್ವಾಮಿಯ ಭಂಡಾರ ತೆಗೆಯುವುದು,ರಾತ್ರಿ ಗಂಟೆ 10ಕ್ಕೆ ಸತ್ಯದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ರಾತ್ರಿ ಗಂಟೆ 1 ಕ್ಕೆ ಸ್ವಾಮಿ ಕೊರಗಜ್ಜ ದೈವಕ್ಕೆ ಹರಕೆಯ ಹೂ ಮಾಲೆ ಅರ್ಪಿಸುವುದು.
ದಿನಾಂಕ 25.2.2024ರಂದು ಪ್ರಾತ:ಕಾಲ 5:00ಗೆ ಸ್ವಾಮಿ ಕೊರಗಜ್ಜ ದೈವದ ಪ್ರಸಾದ ವಿತರಣೆ ನಡೆಯಲಿದೆ ಬೆಳಗ್ಗೆ 6 ಗಂಟೆಗೆ ತುಲಾಭಾರ ಸೇವೆ ನಡೆಯಲಿದೆ ಎಂದು ಶ್ರೀ ಸ್ವಾಮಿ ಕೊರಗತನಿಯ ದೈವದ ದೈವಸ್ಥಾನದ ಆಡಳಿತ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.