• 27 ಮಾರ್ಚ್ 2025

ಮಾರ್ಚ್ 1 ರಂದು ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದಲ್ಲಿ ರಾಶಿಪೂಜೆ 

 ಮಾರ್ಚ್ 1 ರಂದು ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದಲ್ಲಿ ರಾಶಿಪೂಜೆ 
Digiqole Ad

ಮಾರ್ಚ್ 1 ರಂದು ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದಲ್ಲಿ ರಾಶಿಪೂಜೆ 

ಪುರಾತನ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದಲ್ಲಿ ಮಂಗಳವಾರ ಸಿಡಿಕಂಬ ಮುಹೂರ್ತವಾಗಿ, ಮೂರು ದಿನ ಚೆಂಡು ಆಟ ಆರಂಭವಾಗಿ ಶುಕ್ರವಾರ ರಾಶಿಪೂಜೆ ನಡೆಯಲಿದೆ. ಗುರುವಾರ ಮಧ್ಯಾಹ್ನ ತೋರಣ ಮುಹೂರ್ತ, ರಾಶಿ ಅಕ್ಕಿ ಅಳೆಯುವುದು, ಬೋವಿ ಸಮಾಜದವರಿಗೆ ತೀರ್ಥ ಕೊಡುವುದು, ಸಂಜೆ ಕಡೆಚಿಂಡು ರಾತ್ರಿ ದೇವಿ ದರ್ಶನ ನಡೆಯಲಿವೆ. ಶುಕ್ರವಾರ ಮಧ್ಯಾಹ್ನ ಹನುಮಂತ ದೇವಸ್ಥಾನದಿಂದ ಪರಂಪರೆಯಂತೆ ಬಂಗಾರ ತರುವುದು, ರಾತ್ರಿ ಗಂ.11ಕ್ಕೆ ಮಹಮ್ಮಾಯಿ ದೇವಸ್ಥಾನದ ಬಳಿಯಿಂದ ರಾಶಿ ಹೊತ್ತು ತರುವುದು, ಮಹಾರಾಶಿ ಪೂಜೆ, ಪೂರ್ವ ಪದ್ಧತಿಯಂತೆ ಸಾಂಕೇತಿಕವಾಗಿ ಸಿಡಿ ಸುರಿಸುವುದೇ ಮೊದಲಾದ ವಿಧಿಗಳು ನಡೆಯಲಿವೆ. ಯಕ್ಷ ನಿಧಿ ಮೂಡುಬಿದಿರೆ, ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳದವರಿಂದ ‘ತಂಗಡಿ ಕಾಳಮ್ಮ ಬಯಲಾಟ, ಮಣಿ ಕೋಟೆಬಾಗಿಲು ಸಾರಥ್ಯದಲ್ಲಿ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ‘ಕದಂಬ’ ತುಳುನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ