• 27 ಮಾರ್ಚ್ 2025

ನೂಜಿಬಾಳ್ತಿಲ ಶ್ರೀ ಚಂದ್ರನಾಥಸ್ವಾಮಿ ಬಸದಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಟ್ಟು ಹದಿಮೂರು ಲಕ್ಷ ಸಹಾಯಧನ ವಿತರಣೆ!

 ನೂಜಿಬಾಳ್ತಿಲ ಶ್ರೀ ಚಂದ್ರನಾಥಸ್ವಾಮಿ ಬಸದಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಟ್ಟು ಹದಿಮೂರು ಲಕ್ಷ ಸಹಾಯಧನ ವಿತರಣೆ!
Digiqole Ad

ನೂಜಿಬಾಳ್ತಿಲ ಶ್ರೀ ಚಂದ್ರನಾಥಸ್ವಾಮಿ ಬಸದಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಟ್ಟು ಹದಿಮೂರು ಲಕ್ಷ ಸಹಾಯಧನ ವಿತರಣೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ವತಿಯಿಂದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ ಒಂದುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಚಂದ್ರನಾಥ ಸ್ವಾಮಿ ಬಸದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರುಗೊಳಿಸಿದ ಮೂರು ಲಕ್ಷ ರೂಪಾಯಿಯ ಡಿ ಡಿ ಹಾಗೂ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ನಾವೂರು ವಿತರಿಸಿ ಮಾತನಾಡಿ ಕ್ಷೇತ್ರದಿಂದ ನೂಜಿಬಾಳ್ತಿಲ ಗ್ರಾಮದ ಚಂದ್ರನಾಥ ಸ್ವಾಮಿಯ ಬಸದಿಗೆ ಈ ಹಿಂದೆ ಹತ್ತು ಲಕ್ಷದ ಅನುದಾನ ವಿತರಣೆಯಾಗಿದ್ದು ಸಮಿತಿ ಸದಸ್ಶರ ಮನವಿಯಂತೆ ಮತ್ತೊಮ್ಮೆ ಮೂರುಲಕ್ಷ ರೂಪಾಯಿ ಮಂಜೂರಾತಿಯಾಗಿದ್ದು ಮಂಜೂರಾದ ಮೊತ್ತವನ್ನು ಶ್ರೀ ಕ್ಷೇತ್ರದ ಅಭಿವೃಧ್ಧಿಗೆ ಬಳಸಿಕೊಳ್ಳುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ರೆಂಜಿಲಾಡಿ ಬೀಡು ಯಶೋಧರ ಯಾನೆ ತಮ್ಮಯ್ಶ ಬಲ್ಲಾಳ್ ಬಸದಿ ನಿರ್ಮಾಣ ಸಮಿತಿ ಅಧ್ಯಕ್ಷರಾದ ಶುಭಕರ ಜೈನ್ ˌ ಕಾರ್ಯದರ್ಶಿ ಮಹಾವೀರ ಜೈನ್ ಡೆಪ್ಪುಣಿ ˌಉಪಾಧ್ಶಕ್ಷ ಯಶೋಧರ ಶೆಟ್ಟಿ ˌಯೋಜನೆಯ ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ. ನೂಜಿಬಾಳ್ತಿಲ ಒಕ್ಕೂಟದ ಅಧ್ಶಕ್ಷ ಸುಧೀಶ್ ಕುಮಾರ್ ಮಂಜೋಳಿಮೂಲೆ ˌ ರೆಂಜಿಲಾಡಿ ಸೇವಾಪ್ರತಿನಿಧಿ ಸುಗುಣ. ನೂಜಿಬಾಳ್ತಿಲ ಸೇವಾಪ್ರತಿನಿಧಿ ಅಪರ್ಣˌ ಯೋಜನೆಯ ಸದಸ್ಶರಾದ ಗಂಗಾಧರ ˌ ಬಸದಿ ನಿರ್ಮಾಣ ಸಮಿತಿ ಸದಸ್ಶರುಗಳಾದ ಜೀನೇಂದ್ರ ಜೈನ್ ನಾಗಕನ್ನಿಕಾ ˌಜೀನೇಂದ್ರ ಇಂದ್ರ ˌ ರವರು ಉಪಸ್ಥಿತರಿದ್ದರು.

..

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ