ಕೋಟ: ಅಂಗಡಿಗೆ ನುಗ್ಗಿ ನಗದು ಮತ್ತು ಮಧ್ಯ ಕಳವು.
ಕೋಟ: ಅಂಗಡಿಗೆ ನುಗ್ಗಿ ನಗದು ಮತ್ತು ಮಧ್ಯ ಕಳವು.
ಶುಕ್ರವಾರ ನಸುಕಿನ ಸುಮಾರು 3 ಗಂಟೆಯಿಂದ 5 ಗಂಟೆಯ ಅವಧಿಯಲ್ಲಿ ವಡ್ಡರ್ಸೆ ಎಂಬಲ್ಲಿಂದ ಹಳ್ಳಾಡಿಯವರೆಗೆ ಐದು ಅಂಗಡಿಯ ಬಾಗಿಲಿನ ಬೀಗ ಒಡೆದು ಒಳನುಗ್ಗಿದ ಕಳ್ಳರು ಸರಣಿ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದ್ದು, ಹಾರ್ಡ್ ವೇರ್ ಅಂಗಡಿ, ಬಾರ್, ಬೇಕರಿ, ಹೋಟೇಲ್‌ಗಳಿಗೆ ನುಗ್ಗಿದ ಕಳ್ಳರು ಸುಮಾರು 75ಸಾವಿರ ರೂಪಾಯಿ ಹಾಗೂ ಮದ್ಯದ ಬಾಟಲಿಗನ್ನು ದೋಚಿ ಪರಾರಿಯಾದ ಘಟನೆ, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹರ್ಕಾಡಿಯಲ್ಲಿರುವ ತಲ್ಲೂರು ಬಾರಿನ ಕ್ಯಾಶ್‌ನಲ್ಲಿದ್ದ 50 ಸಾವಿರ ನಗದು ಹಾಗೂ ಸುಮಾರು 4 ಸಾವಿರ ಮೌಲ್ಯದ ಮದ್ಯ ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.