ಪ್ರಧಾನಿ ಮೋದಿಯ ಚಿತ್ರವಿರುವ ಆಹಾರ ಧಾನ್ಯ ಚೀಲಗಳ ಖರೀದಿಗೆ 5 ರಾಜ್ಯಗಳಲ್ಲಿ 15 ಕೋಟಿ ರೂ. ವ್ಯಯಿಸಲಿರುವ ಕೇಂದ್ರ ಸರಕಾರ
ಪ್ರಧಾನಿ ಮೋದಿಯ ಚಿತ್ರವಿರುವ ಆಹಾರ ಧಾನ್ಯ ಚೀಲಗಳ ಖರೀದಿಗೆ 5 ರಾಜ್ಯಗಳಲ್ಲಿ 15 ಕೋಟಿ ರೂ. ವ್ಯಯಿಸಲಿರುವ ಕೇಂದ್ರ ಸರಕಾರ
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರವು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ ಚೀಲಗಳನ್ನು ಖರೀದಿಸಲು ಐದು ರಾಜ್ಯಗಳಲ್ಲಿ ರೂ 15 ಕೋಟಿ ವ್ಯಯಿಸುತ್ತಿದೆ .
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾನ್ ಯೋಜನೆಯಡಿಯಲ್ಲಿ 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ಒದಗಿಸಲಾಗುತ್ತದೆ.
ಆರ್‌ಟಿಐ ಉತ್ತರದ ಪ್ರಕಾರ ರಾಜಸ್ಥಾನದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಕಚೇರಿಯು 1.07 ಕೋಟಿ ಚೀಲಗಳಿಗೆ ಆರ್ಡರ್ ನೀಡಿದೆ. 10 ಕೆಜಿ ಧಾನ್ಯ ತುಂಬಿಸಬಹುದಾದ ಈ ಪ್ರತಿ ಚೀಲದ ಬೆಲೆ ರೂ 12.375 ಆಗಿದ್ದು ಒಟ್ಟು ವೆಚ್ಚ ರೂ 13.29 ಕೋಟಿ ಆಗಿದೆ. ಕಾರ್ಪೊರೇಷನ್‌ನ ಮೇಘಾಲಯ ಕಚೇರಿ ತಲಾ ಚೀಲಕ್ಕೆ ರೂ 12.5 ವೆಚ್ಚದಲ್ಲಿ 4.22 ಲಕ್ಷ ಚೀಲಗಳಿಗೆ ಟೆಂಡರ್ ಅನ್ನು ಪ್ಲಾಸ್ಕಾಂ ಇಂಡಸ್ಟ್ರೀಸ್‌ಗೆ ನೀಡಿತ್ತು. ಒಟ್ಟು ವೆಚ್ಚ ರೂ 52.75 ಲಕ್ಷ ಆಗಲಿದೆ.
ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಿಗೆ ಎಸ್‌ಎಸ್‌ಎಸ್ ಸರ್ವಿಸಸ್ ಎಂಬ ಕಂಪೆನಿ ತಲಾ ಬ್ಯಾಗ್‌ಗೆ ರೂ 14.3 ವೆಚ್ಚದಂತೆ ಟೆಂಡರ್ ಪಡೆದಿದೆ. ಮಿಜೋರಾಂನಲ್ಲಿ 1.75 ಲಕ್ಷ ಚೀಲಗಳಿಗೆ ರೂ 25 ಲಕ್ಷ ಹಾಗೂ ತ್ರಿಪುರಾದಲ್ಲಿ 5.98 ಲಕ್ಷ ಚೀಲಗಳಿಗೆ ರೂ 85.51 ಲಕ್ಷ ವೆಚ್ಚ ಆಗಲಿದೆ.