ಈಶ್ವರಮಂಗಲ: ಜಗದೊಡೆಯ ಶ್ರೀ ಪಂಚಲಿಂಗೇಶ್ವರ ದೇವರಿಗೆ ವರ್ಷಾವಧಿ ಜಾತ್ರೋತ್ಸವ.
ಈಶ್ವರಮಂಗಲ: ಜಗದೊಡೆಯ ಶ್ರೀ ಪಂಚಲಿಂಗೇಶ್ವರ ದೇವರಿಗೆ ವರ್ಷಾವಧಿ ಜಾತ್ರೋತ್ಸವ.
ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಈಶ್ವರಮಂಗಲದಲ್ಲಿ ದಿನಾಂಕ 06-03-2024 ರಿಂದ 18-03-2024ರ ತನಕ ಜಾತ್ರೋತ್ಸವ ನಡೆಯಲಿದೆ. ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಪೇ.23 ಶುಕ್ರವಾರ ಗೊನೆ ಮುಹೂರ್ತಗೊಂಡಿದ್ದು. ಮಾ.3ರಂದು ಪ್ರತಿಷ್ಠೆ ಹಾಗೂ ವಿವಿಧ ಸೇವೆ ಹಾಗೂ ಮಹಾಪೂಜೆ. ಮಾ.05 ಹಸಿರುವಾಣಿ ಹೊರೆಕಾಣಿಕೆ, ಉಗ್ರಾಣ ತುಂಬುವುದು.
ಮಾ.06ರಂದು ಯಕ್ಷಗಾನ ತಾಳಮದ್ದಳೆ ಮತ್ತು ತುಳು ಸಾಮಾಜಿಕ ಹಾಸ್ಯಮಯ ನಾಟಕ ” ಇನಿ ಅತ್ತಂಡ ಎಲ್ಲೆ” ನಡೆಯುವುದು. ಮಾ.07ರಂದು ಮೂಲಸ್ಥಾನವಾದ ಮೆಣಸಿನಕಾನದಲ್ಲಿ ತಂತ್ರಿವರ್ಯರಿಂದ ಪೂಜೆ. ದಿ.08ರಂದು ಮಹಾಶಿವರಾತ್ರಿ ಮಹೋತ್ಸವ. ಅರ್ಧ ಏಕಾಹ ಭಜನೆ. ಮಾ.10ರಂದು ನಡುದೀಪೋತ್ಸವ. ಮಾ.11 ಮಹಾದರ್ಶನಬಲಿ, ಬಟ್ಟಲು ಕಾಣಿಕೆ,ರಾಜಾಂಗಣ ಪ್ರಸಾದ ವಿತರಣೆ. ಸಾಂಸ್ಕೃತಿಕ ಕಾರ್ಯಕ್ರಮಗಳು. ಮಾ.12.ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ. ದಿ.13ರಂದು ಬೆಡಿಸೇವೆ. ದಿ.14ರಂದು ಮಾಡದ ಗುಡ್ಡೆ ದೈವಗಳ ಚಾವಡಿಯಲ್ಲಿ ಕಿನ್ನಿಮಾಣಿ, ಪೂಮಾಣಿ, ಪಿಲಿಚಾಮುಂಡಿ ದೈವಗಳ ನೇಮ. ಅನ್ನಸಂತರ್ಪಣೆ ನಡೆಯಲಿದೆ.