• 20 ಮಾರ್ಚ್ 2025

10ನೇ ಕುಲಪತಿಯಾಗಿ ಡಾ.ಪಿ.ಎಲ್.ಧರ್ಮ ಅಧಿಕಾರ ಸ್ವೀಕಾರ

 10ನೇ ಕುಲಪತಿಯಾಗಿ ಡಾ.ಪಿ.ಎಲ್.ಧರ್ಮ ಅಧಿಕಾರ ಸ್ವೀಕಾರ
Digiqole Ad

10ನೇ ಕುಲಪತಿಯಾಗಿ ಡಾ.ಪಿ.ಎಲ್.ಧರ್ಮ ಅಧಿಕಾರ ಸ್ವೀಕಾರ

ಮಂಗಳೂರು ವಿಶ್ವವಿದ್ಯಾನಿಲಯದ ಬಹುನಿರೀಕ್ಷಿತ “ಕುಲಪತಿ’ ಹುದ್ದೆಗೆ ಮಂಗಳೂರು ವಿವಿಯ ಮಾಜಿ ಕುಲಸಚಿವ (ಪರೀಕ್ಷಾಂಗ), ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ|ಪಿ.ಎಲ್‌.ಧರ್ಮ ಅವರನ್ನು ನೇಮಕಗೊಳಿಸಿ ಮಂಗಳವಾರ ರಾಜ್ಯಪಾಲರ ಸಚಿವಾಲಯ ಆದೇಶಿಸಿದೆ.

ಈ ಸುದ್ದಿ ಓದಿದ್ದೀರಾ?:ಸುಳ್ಳು ಸುದ್ದಿ, ದ್ವೇಷ ಭಾಷಣ ಮಾಡಿದ್ರೆ ‘ಸುಮೋಟೋ ಕೇಸ್‌’: ಸಿಎಂ ಸಿದ್ದರಾಮಯ್ಯ

ನೂತನ ಕುಲಪತಿ ಪ್ರೊ|ಪಿ.ಎಲ್‌.ಧರ್ಮ ಅವರು ಮಂಗಳವಾರ ಸಂಜೆ ವಿವಿ ಪ್ರಭಾರ ಕುಲಪತಿ ಪ್ರೊ| ಜಯರಾಜ್‌ ಅಮೀನ್‌ ಅವರಿಂದ ಅಧಿಕಾರ ಸ್ವೀಕರಿಸಿದರು. 4 ವರ್ಷಗಳಿಂದ ಮಂಗಳೂರು ವಿ.ವಿ. ಕುಲಪತಿಯಾಗಿದ್ದ ಪ್ರೊ|ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕಳೆದ ವರ್ಷ ಜೂ.2ರಂದು ಸೇವಾ ನಿವೃತ್ತಿಯಾಗಿದ್ದರು. ಅಲ್ಲಿಂದ ಕುಲಪತಿ ಹುದ್ದೆ ಖಾಲಿ ಇತ್ತು. ಜೂ.2ರಂದು “ಪ್ರಭಾರ ಕುಲಪತಿ’ಯಾಗಿ ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಲಾ ನಿಕಾಯದ ಡೀನ್‌ ಪ್ರೊ| ಜಯರಾಜ್‌ ಅಮೀನ್‌ ಅವರು ಅಧಿಕಾರದಲ್ಲಿದ್ದರು.

 

Digiqole Ad

ಈ ಸುದ್ದಿಗಳನ್ನೂ ಓದಿ