ಈಶ್ವರಮಂಗಲ: ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದ ಹೊರೆಕಾಣಿಕೆ ಮೆರವಣಿಗೆ.
ಈಶ್ವರಮಂಗಲ: ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದ ಹೊರೆಕಾಣಿಕೆ ಮೆರವಣಿಗೆ.
ಪುತ್ತೂರು ತಾಲೂಕಿನ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಹೊರೆಕಾಣಿಕೆಯು ಮಾ.05 ರಂದು ಸಂಜೆ ಗಂಟೆ 4ರಿಂದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಬಳಿಯಿಂದ ಮಕ್ಕಳ ಕುಣಿತ ಭಜನೆಯೊಂದಿಗೆ ಹೊರಟ ಹಸಿರುವಾಣಿ ಹೊರೆ ಕಾಣಿಕೆಯನ್ನು ಭಕ್ತಾಭಿಮಾನಿಗಳು ದೇವಸ್ಥಾನಕ್ಕೆ ಸಮರ್ಪಿಸಿದರು.
ಹೊರೆ ಕಾಣಿಕೆಯನ್ನು ಗೋಪಾಲ ಕೃಷ್ಣ ಕಲ್ಲೂರಾಯ ಇವರು ಉದ್ಘಾಟಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಮಂಜುನಾಥ್ ರೈ ಸಾಂತ್ಯ, ಕಾರ್ಯದರ್ಶಿಗಳಾದ ಮೋಹನ್ ದಾಸ್ ರೈ ನೂಜಿಬೈಲು, ಮುಂಡ್ಯ ಶ್ರೀ ಕೃಷ್ಣ ಭಟ್ ಮತ್ತು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.