ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೇಶನ
ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೇಶನ
ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರ ಪತ್ನಿ &ಇನ್ಫೋಸಿಸ್ ಫೌಂಡೇಷನ್‌ನ ಸುಧಾ ಮೂರ್ತಿ ಅವರನ್ನು ಬಿಜೆಪಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಈ ಬಗ್ಗೆ ಪ್ರಧಾನಿ ಮೋದಿ ಟ್ವಿಟ್ ಮಾಡಿ ‘ರಾಷ್ಟ್ರಪತಿಗಳು, ಸುಧಾಮೂರ್ತಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಸಮಾಜ ಸೇವೆ, ಲೋಕೋಪಕಾರಿ& ಶಿಕ್ಷಣ ಸೇರಿ ನಾನಾ ಕ್ಷೇತ್ರಗಳಿಗೆ ಸುಧಾಜಿಯವರ ಕೊಡುಗೆ ಅಪಾರ& ಸ್ಪೂರ್ತಿದಾಯಕ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ ನಾರಿ ಶಕ್ತಿಗೆ ಪ್ರಬಲವಾದ ಸಾಕ್ಷಿಯಾಗಿದೆ. ಅವರ ಸಂಸದೀಯ ಅವಧಿ ಫಲಪ್ರದವಾಗಲಿ’ ಎಂದು ಹಾರೈಸಿದ್ದಾರೆ.