ಕಾರು ಡಿಕ್ಕಿ ಹೊಡೆಸಿ ಯುವತಿ ಮೇಲೆ ಹಲ್ಲೆ.! ಖ್ಯಾತ ಕಿರುತೆರೆ ನಟಿ ವಿರುದ್ಧ ಆರೋಪ.
ಕಾರು ಡಿಕ್ಕಿ ಹೊಡೆಸಿ ಯುವತಿ ಮೇಲೆ ಹಲ್ಲೆ.! ಖ್ಯಾತ ಕಿರುತೆರೆ ನಟಿ ವಿರುದ್ಧ ಆರೋಪ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಕ್ಸಿಡೆಂಟ್ ಮಾಡಿ ಯುವತಿ ಮೇಲೆ ಹಲ್ಲೆ ಮಾಡಿರುವ ಕಿರು ತೆರೆ ನಟಿಯ ಪುಂಡಾಟಿಕೆ ತಡವಾಗಿ ಬೆಳಕಿಗೆ ಬಂದಿದೆ. ನಟಿ ಹಾಗೂ ಅವರ ಸಹಚರನಿಂದ ಯುವತಿ ಮೇಲೆ ಹಲ್ಲೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಘಟನೆ ನಡೆದಿದೆ. ಕನ್ನಡದ ಕಿರುತೆರೆ ನಟಿ ಲಕ್ಷ್ಮಿ ಸಿದ್ದಯ್ಯರಿಂದ ಕೃತ್ಯ ನಡೆದಿದೆ.
ಈ ಸುದ್ದಿಯನ್ನು ಓದಿದ್ದೀರಾ.?ಭಗವದ್ಗೀತೆಯೊಂದಿಗೆ ಧೋನಿ.. ವೈರಲ್
ನಟಿ ನಡುರಸ್ತೆಯಲ್ಲೇ ರಂಪಾಟ ಮಾಡಿದ್ದು, ಆಕ್ಸಿಡೆಂಟ್ ಮಾಡಿದ್ದಲ್ಲದೇ ಯುವತಿಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮಾಧುರಿ ತಮ್ಮ ಮೊಬೈಲ್ ನಲ್ಲಿ ಲಕ್ಷ್ಮಿಯ ರಂಪಾಟ ಮಾಡುತ್ತಿದ್ದನ್ನು ರೆಕಾರ್ಡ್ ಮಾಡಿಕೊಳ್ಳಲು ಮುಂದಾದಾಗ ಪಾನಮತ್ತರಾಗಿದ್ದ ನಟಿ ಅದನ್ನು ಕಿತ್ತುಕೊಂಡು ರೆಕಾರ್ಡಿಂಗ್ ಡಿಲೀಟ್ ಮಾಡುವ ಪ್ರಯತ್ನ ಮಾಡಿದ್ದರು ಎಂದು ಸೋದರಿಯರ ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಲಕ್ಷ್ಮಿಸಿದ್ದಯ್ಯ ಅವಾಚ್ಯ ಪದಗಳಲ್ಲಿ ತನ್ನ ಮಕ್ಕಳನ್ನು ಬೈದಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಕಳೆದ ಡಿಸೆಂಬರ್ 6 ನೇ ತಾರೀಕಿನಂದು ನಡೆದ ಘಟನೆ ನಡೆದಿದ್ದು, ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದ ಘಟನೆ ತುಂಬಾ ತಡವಾಗಿ ಈಗ ವೈರಲ್ ಆಗಿದೆ.
ಮಾಧುರಿ ತನ್ನ ಸೋದರಿ ಐಶ್ವರ್ಯ ಜೊತೆ ತಮ್ಮ ಯಮಹಾ ಫೆಸಿನೋ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ನಟಿ ತನ್ನ ಐ20 ಕಾರಿನಿಂದ ಮಾಧುರಿ ಮೊಪೆಡ್ ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದಿದ್ದಲ್ಲದೆ ಲಕ್ಷ್ಮಿ ಸಿದ್ದಯ್ಯ ಕಿರಿಕ್ ಕೂಡಾ ಮಾಡಿದ್ದಾರೆ.
ಈ ಸುದ್ಧಿಯನ್ನು ಓದಿದ್ದೀರಾ.? ಮಧೂರು ಶ್ರೀ ಮದನಂತೇಶ್ವರನ ಇತಿಹಾಸ..
ಕಿರಿಕ್ ಮಾಡಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಲಕ್ಷ್ಮಿ ಹಾಗೂ ಆನಂದ್ ಕುಮಾರ್ ಎಂಬವರು ಹಲ್ಲೆ ಆರೋಪ ಮಾಡಿದ್ದಾರೆ ಎಂದು ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಗಲಾಟೆ ನಡೆದು 3 ತಿಂಗಳಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.