ಅಶೋಕ್ ರೈ ಅವರೇ ನಿಜವಾದ ಲೆಕ್ಕ ಕೊಡಿ : ದಕ್ಷಿಣ ಕನ್ನಡ ಬಿಜೆಪಿ
ಅಶೋಕ್ ರೈ ಅವರೇ ನಿಜವಾದ ಲೆಕ್ಕ ಕೊಡಿ : ದಕ್ಷಿಣ ಕನ್ನಡ ಬಿಜೆಪಿ !
ಸುಳ್ಯ ಯೋಜನೆಯ ಅನುದಾನದ ಲೆಕ್ಕ ಕುರಿತಂತೆ ಲೆಕ್ಕ ನೀಡಿರುವ ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ವಿರುದ್ಧವಾಗಿ ದಕ್ಷಿಣ ಕನ್ನಡ ಬಿಜೆಪಿಯು,
ಸುಳ್ಳು ಅನುದಾನದ ಲೆಕ್ಕ ನೀಡಿರುವ ವಿರುದ್ಧ ನಿಜವಾದ ಲೆಕ್ಕ ತೆರೆದಿಡಲು ಆಗ್ರಹಿಸಿಅಶೋಕ್ ರೈ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ#ಲೆಕ್ಕಕೊಡಿಅಶೋಕರೈ
#ದ್ವೇಷಬಿಡಿಲೆಕ್ಕಕೊಡಿ,ಅಶೋಕನ ಅವಾಂತರಗಳನ್ನು ಈ ಮೇಲಿನ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ತೆರೆದಿಡೋಣ
ಎಂದು ರಾಜ್ಯದ ಬಿಜೆಪಿ ಕಾರ್ಯಕರ್ತರ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ವೈರಲ್ ಆಗ್ತಾ ಇದೆ.
ಕಾರಣ ಏನು?
ಜಯಾನಂದ ಬಂಗೇರ ಎಂಬುವವರು ಪುತ್ತೂರು ಶಾಸಕ ಅಶೋಕ ರೈ ರವರ ಕೋಟಿ ಅನುದಾನದ ಭಾಷಣದ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ನಿಜವಾದ ಲೆಕ್ಕ ಕೊಡಿ ಎಂದು ಬರಹಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬರಹ ಹಂಚಿದ್ದರು ಈ ವಿಷಯವಾಗಿ ಆಕ್ರೋಶಗೊಂಡ ಶಾಸಕ ಅಶೋಕ ರೈ ರವರ ತಂಡದ 15 ಅಧಿಕ ಜನರು ಚಂಡೆ ವಾದ್ಯಗಳ ಜೊತೆಗೆ ಅನುದಾನದ ಬ್ಯಾನರ್ ಯೋಜನೆಯೊಂದಿಗೆ ಜಯಾನಂದ ಬಂಗೇರ ರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ನಿಂಧಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,ಪ್ರಜ್ವಲ್ ರೈ, ಸನತ್ ರೈ ಸಹಿತ 15 ಮಂದಿಯ ಮೇಲೆ ಪ್ರಕರಣದಾಖಲಾಗಿತ್ತು. ಈ ವಿಷಯವಾಗಿ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸದಸ್ಯ ತಾರಿಗುಣ್ಣ ನಿವಾಸಿ ಜಯಾನಂದ ಕೆ. (41) ದೂರು ನೀಡಿದ್ದರು