• 30 ಮೇ 2024

ಭಾರಿ ಬಿರುಗಾಳಿಗೆ ಕುಸಿದು ಬಿದ್ದ ಬೃಹತ್ ಹೋರ್ಡಿಂಗ್; 14 ಸಾವು,70ಕ್ಕೂ ಹೆಚ್ಚು ಜನರಿಗೆ ಗಾಯ.

 ಭಾರಿ ಬಿರುಗಾಳಿಗೆ ಕುಸಿದು ಬಿದ್ದ ಬೃಹತ್ ಹೋರ್ಡಿಂಗ್; 14 ಸಾವು,70ಕ್ಕೂ ಹೆಚ್ಚು ಜನರಿಗೆ ಗಾಯ.
Digiqole Ad

ಭಾರಿ ಬಿರುಗಾಳಿಗೆ ಕುಸಿದು ಬಿದ್ದ ಬೃಹತ್ ಹೋರ್ಡಿಂಗ್; 14 ಸಾವು,70ಕ್ಕೂ ಹೆಚ್ಚು ಜನರಿಗೆ ಗಾಯ.

ಮುಂಬೈ ಮೇ.14: ಬಿರುಗಾಳಿ ಸಹಿತ ಮಳೆಯ ಅವಾಂತರಕ್ಕೆ ಸೋಮವಾರ ಮುಂಬೈನ ಘಾಸ್ಕೋಪ‌ರ್ ಪೆಟ್ರೋಲ್ ಪಂಪ್ ಮೇಲೆ 100 ಅಡಿ ಉದ್ದದ ಅಕ್ರಮ ಜಾಹೀರಾತು ಹೋರ್ಡಿಂಗ್ ಬಿದ್ದು ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿದೆ ಮತ್ತು 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸೋಮವಾರ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಹಲವೆಡೆ ಮರಗಳು ಧರೆಗುರುಳಿದ್ದು, ಅಲ್ಲದೆ ಜನಜೀವನ ಅಸ್ತವ್ಯಸ್ತವಾಗಿವೆ.

ಈ ಸುದ್ದಿಯನ್ನು ಓದಿದ್ದೀರಾ.?ಕಾರ್ಖಾನೆಯ ಎಳನೀರು ಕುಡಿದು ಅಸ್ವಸ್ಥ ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಪರಿಶೀಲನೆ

ಇದೆ ವೇಳೆ ಪಂತನಗರದ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯ ಬಳಿ ಇರುವ ಪೆಟ್ರೋಲ್ ಪಂಪ್ ಮೇಲೆ ಅತೀ ದೊಡ್ಡ ಹೋರ್ಡಿಂಗ್ ಕುಸಿದು ಬಿದ್ದ ಪರಿಣಾಮ ಪೆಟ್ರೋಲ್‌ ಬಂಕ್‌ ಸೇರಿದಂತೆ ಹಲವಾರು ಕಾರುಗಳ ಮೇಲೆ ಬಿದ್ದಿದೆ ಪರಿಣಾಮ ಎಪ್ಪತ್ತಕ್ಕೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು ಕೂಡಲೇ ಕಾರ್ಯಪ್ರವೃತ್ತರಾದ ರಕ್ಷಣಾ ತಂಡ ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳನ್ನು ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಅಪರಿಚಿತರಿಂದ ಹಲ್ಲೆ.!

ಮಿತಿಗಿಂತ ದೊಡ್ಡ ಪ್ರಮಾಣದಲ್ಲಿ ಹೋರ್ಡಿಂಗ್ ಹಾಕಿದ್ದ ಏಜೆನ್ಸಿಗೆ ಮುಂಬೈ ಮಹಾನಗರ ಪಾಲಿಕೆ ನೋಟಿಸ್‌ ಜಾರಿ ಮಾಡಿದೆ ಎಂದು ಹೇಳಲಾಗಿದೆ. ಅಕ್ರಮವಾಗಿ ಹೋರ್ಡಿಂಗ್ ಹಾಕಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಂಬೈ ಪೊಲೀಸ್‌ ಆಯುಕ್ತ ವಿವೇಕ್ ಫನ್ಸಾಲ್ಕ‌ರ್ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ನೋಬಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ನಾಲ್ಕು ತಿಂಗಳ ಪುಟ್ಟ ಕಂದಮ್ಮ. 

ಘಟನೆಯ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸ್ಥಳಕ್ಕೆ ತೆರಳಿ, ಪರಿಸ್ಥಿತಿ ಅವಲೋಕಿಸಿದ್ದಾರೆ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುವುದು ಮತ್ತು ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

GOLDFACTORYNEWS.COM
the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.
Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!