ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೇಂದ್ರ ಒಕ್ಕೂಟ ಸಮಿತಿ ಸಭೆ..
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೇಂದ್ರ ಒಕ್ಕೂಟ ಸಮಿತಿ ಸಭೆ..
ಒಕ್ಕೂಟದ ಅಧ್ಯಕ್ಷರುಗಳು ಒಕ್ಕೂಟದ ಕಣ್ಣಾಗಿರಬೇಕು ಪ್ರಾದೇಶಿಕ ನಿರ್ದೇಶಕರಾದ ದುಗ್ಗೇಗೌಡ ಅಭಿಪ್ರಾಯ..
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಕೇಂದ್ರ ಒಕ್ಕೂಟದ ಸಮಿತಿ ಸಭೆಯು ಕಡಬ ಅಂಬೇಡ್ಕರ್ ಸಭಾ ಭವನದಲ್ಲಿ ನಡೆಯಿತು.
ಸಭೆಯನ್ನು ಉದ್ಘಾಟಿಸಿದ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೆ ಗೌಡ ರವರು ಮಾತನಾಡಿ ಒಕ್ಕೂಟದ ಅಧ್ಯಕ್ಷರುಗಳು ತಮ್ಮ ಒಕ್ಕೂಟದ ನಿರ್ವಹಣೆಗೆ ಬಹಳಷ್ಟು ಶ್ರಮ ಹಾಕಿರುತ್ತಾರೆ. ಎಲ್ಲರಿಗೂ ಯೋಜನೆಯ ಸೌಲಭ್ಯ ಸುಲಭವಾಗಿ ದೊರೆಯಲು ಒಕ್ಕೂಟ ಅತೀ ಅಗತ್ಯ .ಒಕ್ಕೂಟದ ಅಧ್ಯಕ್ಷರುಗಳು ಒಕ್ಕೂಟದ ಕಣ್ಣಾಗಿ ಕೆಲಸ ನಿರ್ವಹಿಸಿದಲ್ಲಿ ಒಕ್ಕೂಟದ ಸದಸ್ಯರ ಕಷ್ಟಸುಖ ಗಳಲ್ಲಿ ಭಾಗಿಯಾಗಲು ಸಾಧ್ಯ ಒಕ್ಕೂಟದ ಅಧ್ಯಕ್ಷರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಮಂಜುನಾಥಸ್ವಾಮಿ ಒದಗಿಸಿದ ಅವಕಾಶ ಇದನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡಬೇಕು. ಒಕ್ಕೂಟದ ಸಂಘ ಗಳಿಗೆ ಯಾವುದೇ ಮಾಹಿತಿ ನೀಡಲು ಹೊರಗಿನ ವ್ಯಕ್ತಿಗಳು ಬರುವುದಾದರೂ ಅದು ಒಕ್ಕೂಟದ ಅನುಮತಿ ಪಡೆದೆ ಬರುವಂತಾಗಬೇಕು ಎಂದರು.
2023-2024ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ಒಕ್ಕೂಟವನ್ನು ಗುರುತಿಸಿ ಒಕ್ಕೂಟದ ಅಧ್ಯಕ್ಷ ರನ್ನು ಅಭಿನಂದಿಸಲಾಯಿತು.
ತಾಲೂಕಿನ 63 ಒಕ್ಕೂಟಗಳಲ್ಲಿ ಪ್ರಥಮ ಸ್ಥಾನ ವನ್ನು ಕಡಬ ವಲಯದ ರಾಮನಗರ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ರಝೀಯ ರವರು ಹಾಗೂ ದ್ವಿತೀಯ ಸ್ಥಾನವನ್ನು ಸವಣೂರು ವಲಯದ ಸವಣೂರು ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗೌಡರವರು ಪಡೆದುಕೊಂಡರು..
ತಾಲೂಕಿನ ಎಲ್ಲಾ ಒಕ್ಕೂಟದ ಅಧ್ಯಕ್ಷ ರುಗಳಿಗೆ ಗುಲಾಬಿ ನೀಡಿ ಶಾಲು ಹಾಕಿ ಗೌರವಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷರಾದ ಸಂತೋಷ್ ಕೇನ್ಯಾ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ನಿಕಟಪೂರ್ವ ವಲಯದ್ಯಕ್ಷರಾದ ವೇಣುಗೋಪಾಲ ಕಳುವಾಜೆ ಕಡಬ ವಲಯದ್ಯಕ್ಷರು ರಮೇಶ್ ರೈ ಅರ್ಪಾಜೆ.ಸವಣೂರು ವಲಯಾಧ್ಯಕ್ಷರು ರಾಮಚಂದ್ರ ಗೌಡ, ನೆಲ್ಯಾಡಿ ವಲಯಾದ್ಯಕ್ಷರು ಕುಶಾಲಪ್ಪ ಗೌಡ, ಗೊಳಿಯೊಟ್ಟು ವಲಯಾದ್ಯಕ್ಷರು ಬಾಲಕೃಷ್ಣ ಗೌಡ ಅಲೆಕೀ, ಅಲಂಕಾರು ವಲಯಾದ್ಯಕ್ಷರು ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು..ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ನಾವೂರು ತಾಲೂಕಿನಲ್ಲಿ ನೀಡಲಾದ ಅನುದಾನಗಳು ಹಾಗೂ 2023-24ನೇ ಸಾಲಿನ ಸಾಧನೆ ಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ಧನ್ಯವಾದ ಮಾಡಿದರು.
ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.ಸಭೆಯಲ್ಲಿ ತಾಲೂಕಿನ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು ಹಾಗೂ ತಾಲೂಕಿನ ಒಕ್ಕೂಟದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.