• 7 ಡಿಸೆಂಬರ್ 2024

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕರ್ನೂರು ಶಾಲೆಯಲ್ಲಿ ಶ್ರಮದಾನ

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕರ್ನೂರು ಶಾಲೆಯಲ್ಲಿ ಶ್ರಮದಾನ
Digiqole Ad

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕರ್ನೂರು ಶಾಲೆಯಲ್ಲಿ ಶ್ರಮದಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯ ವತಿಯಿಂದ ದಿನಾಂಕ 19/6/2024 ನೇ ಬುಧವಾರ ನೆಟ್ಟಣಿಗೆ ಮುಡ್ನೂರು ಕರ್ನೂರು ಶಾಲೆಯಲ್ಲಿ ಶ್ರಮದಾನ ಹಮ್ಮಿಕೊಂಡಿದ್ದರು,ಮಳೆಗಾಲದಲ್ಲಿ ಶಾಲೆಯ ಮಕ್ಕಳ ಬಗೆಗಿರುವ ಜಾಗ್ರತ ಮನೋಭಾವದ ಕಾಳಜಿಯ ಮಹೋದುದ್ದೇಶವನ್ನು ಮುಂದಿಟ್ಟುಕೊಂಡು ಶಾಲೆಯಲ್ಲಿ ಶ್ರಮದಾನವನ್ನು ಕೈಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ.ಟ್ರಸ್ಟ್ (ರಿ) ಪುತ್ತೂರು ಕಾರ್ಯ ವಿಪತ್ತು ಘಟಕ ಅರಿಯಡ್ಕ ವಲಯದ ಎಲ್ಲಾ ಸದಸ್ಯರು ತುಂಬಾ ಅಚ್ಚುಕಟ್ಟಾಗಿ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಕಾರ್ಯದಲ್ಲಿ ವಲಯ ಮೇಲ್ವಿಚಾರಕರಾದ ಶ್ರೀ ಹರೀಶ್ ಕುಲಾಲ್,ಘಟಕದ ಸಂಯೋಜಕರಾದ ಶ್ರೀಮತಿ ಗಾಯತ್ರಿ k.s.ಘಟಕದ ಸದಸ್ಯರಾದ ಶ್ರೀ ರವೀಂದ್ರ, ಶ್ರೀ ವಸಂತ್ ಕೊಯಿಲ,ಶ್ರೀ ರಾಘವ,ವಸಂತ M.S, ಶ್ರೀ ಪ್ರವೀಣ್ ಕುಮಾರ್,ಶ್ರೀ ಹರಿಪ್ರಸಾದ್ ರೈ,ಶ್ರೀ ಗಣೇಶ್, ಶ್ರೀ ಪ್ರಮೀಳಾ ರೈ,ಶ್ರೀ ಕುಸುಮಾ ರೈ, ಶ್ರೀ ವಸಂತಿ,ಶ್ರೀ ಪುಷ್ಪಲತಾ S ಇವರೆಲ್ಲ ಭಾಗಿಯಾಗಿ ಹಮ್ಮಿಕೊಂಡ ಕಾರ್ಯ ಸ್ಪೂರ್ತಿದಾಯಕವಾಗಿ ಸಫಲವಾಗುವಲ್ಲಿ ಸಂಪೂರ್ಣ ಸಹಕಾರವನ್ನಿತ್ತು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಶಾಲಾ ಮುಖ್ಯ ಶಿಕ್ಷಕರಾದ ರಮೇಶ್ ಶಿರ್ಲಾಲ್ ಇವರು ಅಭಿನಂದನೆ ಸಲ್ಲಿಸಿದರು.ಶಿಕ್ಷಕರಾದ ಶ್ರೀಮತಿ ಸಾವಿತ್ರಿ, ಆಶಾಲತಾ, ಹಲೀಮ ನಜಿಮುನ್ನಿಸ ,ಕುಮಾರಿ ವಿಜೇತ,ಸವಿತ,ಅರುಣ ಕುಮಾರಿ ,ಲತಾರಮೇಶ್ ಸಹಕರಿಸಿದರು. ಶ್ರೀ ಮತಿ ಆಶಾಲತಾ ಚಟ್ಟೋಡಿ ಇವರು ಶ್ರಮದಾನ ಮಾಡಿದ ಎಲ್ಲರಿಗೂ ಲಘು ಉಪಹಾರ ನೀಡಿ ಸಹಕರಿಸಿದರು.ಶಾಲಾವತಿಯಿಂದ ಮದ್ಯಾಹ್ನದ ಊಟವನ್ನು ಆಯೋಜಿಸಲಾಯಿತು..

REOORTED BY:- SHRI RAMESH SHIRLAL KARNOOR

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ