• 2 ನವೆಂಬರ್ 2024

ದಕ್ಷಿಣ ಕನ್ನಡದಲ್ಲಿ ವಿದ್ಯುತ್‌ ಶಾಕ್‌ಗೆ 3ನೇ ಬಲಿ

 ದಕ್ಷಿಣ ಕನ್ನಡದಲ್ಲಿ ವಿದ್ಯುತ್‌ ಶಾಕ್‌ಗೆ 3ನೇ ಬಲಿ
Digiqole Ad

ದಕ್ಷಿಣ ಕನ್ನಡದಲ್ಲಿ ವಿದ್ಯುತ್‌ ಶಾಕ್‌ಗೆ 3ನೇ ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಕೇವಲ ಎರಡು ದಿನದಲ್ಲಿ ವಿದ್ಯುತ್‌ ಶಾಕ್‌ ಹೊಡೆದು 3ನೇ ಬಲಿಯಾಗಿದೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಮನೆ ಸಮೀಪದ ಕಂಬದ ಸ್ಟೇ ವಯರ್‌ನಿಂದ ವಿದ್ಯುತ್‌ ಪ್ರವಹಿಸಿ ಪ್ರತೀಕ್ಷಾ ಶೆಟ್ಟಿ(20) ದಾರುಣ ಸಾವನ್ನಪ್ಪಿದ್ದಾರೆ. ಪ್ರತೀಕ್ಷಾ ಮನೆಗೆ ಬಂದ ಪಾರ್ಸೆಲ್‌ ತೆಗೆದುಕೊಳ್ಳಲು ಹೊರಗಡೆ ಬಂದಿದ್ದು, ಆ ವೇಳೆ ಅವರಿಗೆ ವಿದ್ಯುತ್‌ ಶಾಕ್‌ ಹೊಡೆದಿದೆ. ಪ್ರತೀಕ್ಷಾ ಮೆಡಿಕಲ್‌ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ ಮಳೆಯಿಂದ ಎರಡು ದಿನದಲ್ಲಿ 7ಮಂದಿ ಮೃತಪಟ್ಟಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ