• 7 ಡಿಸೆಂಬರ್ 2024

ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಸತ್ ಪದಗ್ರಹಣ ಸಮಾರಂಭ.

 ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಸತ್ ಪದಗ್ರಹಣ ಸಮಾರಂಭ.
Digiqole Ad

ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಸತ್ ಪದಗ್ರಹಣ ಸಮಾರಂಭ.

ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ 2024-25 ನೇ ಸಾಲಿನ ವಿದ್ಯಾರ್ಥಿ ಸರಕಾರದ ಸಂಸತ್ತಿನ ಪದಗ್ರಹಣ ಸಮಾರಂಭವು ಸಂಸ್ಥೆಯ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್ ಇವರ ಮಾರ್ಗದರ್ಶನದಲ್ಲಿ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಜರುಗಿತು. ಸಂಸತ್ತಿನ ಪ್ರಥಮ ಸಮಾವೇಶದಲ್ಲಿ ವಿದ್ಯಾರ್ಥಿ ಸಂಸತ್ತಿನ ರಾಷ್ಟ್ರಪತಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಮಾಲಾ ವಿ.ಎನ್ ರವರು ಮುಖ್ಯಮಂತ್ರಿ  (ಶಾಲಾ ನಾಯಕ) ಪ್ರತೀಕ್ ಎನ್.ಎಸ್ 10ನೇ ತರಗತಿ ಹಾಗೂ ಸಂಪುಟ ದರ್ಜೆ ಸಚಿವರಿಗೆ , ಸಹಾಯಕ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಶಾಲಾ ಸಂಸತ್ತಿನ ಸಭಾಪತಿಯಾಗಿ ಅಕ್ಷರ .ಪಿ 10ನೇ ತರಗತಿ, ಶಿಕ್ಷಣ ಸಚಿವರಾಗಿ ಸಾತ್ವಿಕ್ ರೈ 10ನೇ ತರಗತಿ, ಶಿಸ್ತು ಸಚಿವರಾಗಿ ಮಹೇಶ್ ಕುಮಾರ್ 10ನೇ ತರಗತಿ, ಸಾಂಸ್ಕೃತಿಕ ಸಚಿವರಾಗಿ ವರ್ಷಲಕ್ಷ್ಮಿ 10ನೇ ತರಗತಿ, ಶುಚಿತ್ವ ಸಚಿವರಾಗಿ ಶ್ರೀನಿತ್ 10ನೇ ತರಗತಿ, ಕ್ರೀಡಾ ಸಚಿವರಾಗಿ ಕುಶನ್ 10ನೇ ತರಗತಿ, ತೋಟಗಾರಿಕ ಸಚಿವರಾಗಿ ಪ್ರಥಮ್ ಕೆ 10ನೇ ತರಗತಿ, ನೀರಾವರಿ ಸಚಿವರಾಗಿ ಮಿಥುನ್ ಗೌಡ 10ನೇ ತರಗತಿ, ಆರೋಗ್ಯ ಸಚಿವರಾಗಿ ರಿಷಿಕಾ ಸಿ.ಕೆ 10ನೇ ತರಗತಿ, ಭಜನಾ ಸಚಿವರಾಗಿ ಭರತ್ ಗೌಡ 10ನೇ ತರಗತಿ, ಆಹಾರ ಸಚಿವರಾಗಿ ಸಮರ್ಥ್ 10ನೇ ತರಗತಿ ಆಯ್ಕೆ ಯಾಗಿರುತ್ತಾರೆ. ಬಳಿಕ ಶಾಲಾ ಮುಖ್ಯೋಪಾಧ್ಯಾಯರು ಸದನವನ್ನು ಉದ್ದೇಶಿಸಿ ಮಾತನಾಡುತ್ತಾ ಶಾಲಾ ನಿಯಮ, ವಿದ್ಯಾರ್ಥಿ ಮುಖಂಡರ ಜವಾಬ್ದಾರಿಯ ಬಗ್ಗೆ ತಿಳಿಸಿದರು. ಚುನಾಯಿತ ಮಂತ್ರಿಗಳು ನಿಮ್ಮ ನಿಮ್ಮ ಹುದ್ದೆಯ ಚೌಕಟ್ಟಿನಲ್ಲಿ ಉತ್ತಮ ಸೇವೆ ಕೊಡಬೇಕು. ನಾಯಕ ಸರಿಯಾದ ಜವಾಬ್ದಾರಿ ನಿರ್ವಹಿಸಿ ಅದರ ಜೊತೆಗೆ ವಿದ್ಯಾರ್ಥಿಗಳ ಜವಾಬ್ದಾರಿ, ಶಿಸ್ತುಪಾಲನೆಯ ಬಗ್ಗೆ ವಿವರಿಸಿದರು. ವಿದ್ಯಾರ್ಥಿನಿಯರಾದ ಆರಾಧ್ಯ ಹಾಗೂ ವಿಶಾಖ ಪ್ರಾರ್ಥಿಸಿದರು. 10ನೇ ತರಗತಿ ವಿದ್ಯಾರ್ಥಿನಿ ಯಾದ ಧೃತಿ ರೈ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹ ಶಿಕ್ಷಕಕರಾದ ಶ್ರೀ ಸುಚೇತ್ ಎಂ , ಶ್ರೀಮತಿ ಗೀತಾ ಎಚ್.ಎಸ್ ಹಾಗೂ ಶ್ರೀಮತಿ ಸೌಮ್ಯ ಎ.ಎಂ ಕಾರ್ಯಕ್ರಮ ನಿರ್ವಹಿಸಿ ಸಂಸತ್ತಿನ ಸಮಾವೇಶವನ್ನು ಸಂಯೋಜಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ