• 3 ನವೆಂಬರ್ 2024

ಕಡಬ: ಸರ್ವಸದಸ್ಯರ ಪ್ರಬುದ್ಧತೆ ಯೋಜನೆಯ ಬಧ್ಧತೆ ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಅಭಿಪ್ರಾಯ.

 ಕಡಬ: ಸರ್ವಸದಸ್ಯರ ಪ್ರಬುದ್ಧತೆ ಯೋಜನೆಯ ಬಧ್ಧತೆ ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಅಭಿಪ್ರಾಯ.
Digiqole Ad

ಕಡಬ: ಸರ್ವಸದಸ್ಯರ ಪ್ರಬುದ್ಧತೆ ಯೋಜನೆಯ ಬಧ್ಧತೆ ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಅಭಿಪ್ರಾಯ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ಸಂರಕ್ಷಣಾ ವೇದಿಕೆ ಸಮಿತಿ ರಚನೆ ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಯನ್ ಮಾತನಾಡಿ
ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಮರ್ಪಕ ನಿರ್ವಹಣೆ, ಸ್ವಸಹಾಯ ಸಂಘಗಳ ಹಣಕಾಸು ನಿರ್ವಹಣೆಯ ಬ್ಯಾಂಕಿನ ಸೇವೆಗಳು ,ಯೋಜನೆಯಿಂದ ಸಂಘದ ಸದಸ್ಯರಿಗೆ ಮತ್ತು ಸಮುದಾಯಕ್ಕೆ ದೊರೆಯಬಹುದಾದ ವಿಶೇಷ ಅನುದಾನ ಕಾರ್ಯಕ್ರಮಗಳು ಹಾಗೂ ಯೋಜನೆಯ ಸೌಲಭ್ಯಗಳ ಬಗ್ಗೆ ಸಮರ್ಪಕ ವಾದ ಪಾರದರ್ಶಕವಾದ ಮಾಹಿತಿಯನ್ನು ಪ್ರತೀ ಸಂಘದ ಸದಸ್ಯರುಗಳಿಗೆ ತಿಳುವಳಿಕೆ ನೀಡುವುದು ಅತೀ ಅಗತ್ಯವಾಗಿದೆ.
ಸ್ವಸಹಾಯ ಸಂಘಗಳ ಹಣಕಾಸು ನಿರ್ವಹಣೆ ಬಗ್ಗೆ ಸಮರ್ಪಕ ದಾಖಲಾತಿಗಳಿಲ್ಲದೇ ಅಪಪ್ರಚಾರ ಮಾಡುವ ಸಮಾಜಘಾತುಕ ಸಂಘಟನೆಗಳಿಗೆ ಸಂಘದ ಸದಸ್ಯರುಗಳು ಸರಿಯಾದ ಮನವರಿಕೆ ಮಾಡುವುದು ಅತೀ ಪ್ರಾಮುಖ್ಶವಾಗಿರುತ್ತದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕಿನ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಯೋಜನೆಯ ಮೂಲಕ ಸ್ವಸಹಾಯ ಸಂಘಗಳನ್ನು ರಚನೆಮಾಡಿ ಸಂಘದ ಸದಸ್ಯರ ಮಾಹಿತಿಯನ್ನು ರಾಷ್ಚ್ರೀಕತ ಬ್ಶಾಂಕ್ ಗೆ ನೀಡಿ ಸಂಘದ ಸಾಲದ ಖಾತೆಯನ್ನು ತೆರೆದು ಸಂಘದ ಸದಸ್ಯರ ಅವಶ್ಯಕತೆಗೆ ಸಾಲ ಸೌಲಭ್ಯವನ್ನು ಕಡಿಮೆ ( 13.5%ಕಡಿತ ದರ) ಬಡ್ಡಿದರದಲ್ಲಿ SBI ಬ್ಯಾಂಕಿನಿಂದ ಸಂಘಕ್ಕೆ ಸಾಲವನ್ನು ಒದಗಿಸುತ್ತಿದೆ ಹಾಗೂ ಸದಸ್ಯರು ಪಡೆದ ಸಾಲಕ್ಕೆ ಮರುಪಾವತಿ ಭದ್ರತೆಗಾಗಿ ವಿಮಾ ಕಂಪನಿಯೊಂದಿಗೆ ಯೋಜನೆಯು ಒಡಂಬಡಿಕೆ ಮಾಡಿಕೊಂಡು ಪ್ರಗತಿ ರಕ್ಷಾ ಕವಚ ಎಂಬ ವಿಮೆಯನ್ನು ಸಾಲಗಾರರಿಗೆ ಹಾಗೂ ಸಾಲಗಾರರ ಮನೆಯ ಜವಾಬ್ದಾರಿತ ವ್ಶಕ್ತಿ ವಿನಿಯೋಗದಾರರಿಗೆ ಮಾಡಿಸಲಾಗುತ್ತಿದೆ. ಬ್ಯಾಂಕ್ ನಿಂದ ಸಂಘದ ನಿರ್ವಹಣೆಗಾಗಿ ಯೋಜನೆಗೆ ನೀಡುತ್ತಿರುವ ಸರ್ವಿಸ್ ಚಾರ್ಜ್ ನಿಂದ ಯೋಜನೆಯು ಸಂಘದ ಲೆಕ್ಕಪತ್ರ ನಿರ್ವಹಣೆ ಸಿಬ್ಬಂದಿ ವೆಚ್ಚ ಹಾಗೂ ಕಛೇರಿ ಬಾಡಿಗೆಯಂತಹ ಖರ್ಚುಗಳನ್ನು ಸರಿದೂಗಿಸಿಕೊಂಡು ಉಳಿಕೆ ಹಣವನ್ನು ಸಮುದಾಯದ ಕಾರ್ಯಚಟುವಟಿಕೆಗಳಿಗೆ ಅನುದಾನ ರೂಪದಲ್ಲಿ ಹಿಂತಿರುಗಿಸಲಾಗುತ್ತಿದೆ. ಯೋಜನೆಯ ಕಾರ್ಯಕ್ರಮಗಳ ಪಾರದರ್ಶಕತೆಯನ್ನು ಪ್ರತೀ ಸದಸ್ಯರೂ ತಿಳಿದುಕೊಳ್ಳುವ ಅವಶ್ಯಕತೆ ಇದ್ದು ಸರ್ವಸದಸ್ಯರ ಪ್ರಬುದ್ದತೆಯೇ ಯೋಜನೆಯ ಬದ್ಧತೆ ಎಂದರು.
ಕಾರ್ಯಕ್ರಮವನ್ನು ತಾಲೂಕು ಹಣಕಾಸು ಪ್ರಬಂದಕಿ ಶ್ರೀಮತಿ ಸುಜಾತರವರು ಉಧ್ಧಾಟಿಸಿದರು.
ಕಡಬ ವಲಯದ ಸಂರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ಮಹಮ್ಮದ್ ಆಫೀಕ್ ಕೇಪು ರವರು ಆಯ್ಕೆಯಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊಡ್ಡಕೊಪ್ಪ ಒಕ್ಕೂಟದ ಅಧ್ಯಕ್ಷರಾದ ಕಾಂತಪ್ಪ ಗೌಡರವರು ವಹಿಸಿದ್ದರು.
ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕಡಬ ವಲಯದಲ್ಲಿ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಾಡಿರುವ ಸಾಧನೆಗಳು ವಿತರಿಸಲಾದ ಅನುದಾನಗಳು ಹಾಗೂ ಸಂಘದ ಸಮರ್ಪಕತೆಯ ಮುಖ್ಯ ವಿಷಯಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರುಗಳಾದ ಚಂದ್ರಹಾಸ ಬಿರುಕ್ಕು,ಜಯಾನಂದ ರೆಂಜಿಲಾಡಿ, ನಾಗಣ್ಣಗೌಡ ಕುಟ್ರುಪ್ಪಾಡಿ ,ನಳಿನಿ ರೈ ಕಡಬ ಮತ್ತು ರಝೀಯಾ ಕೊಡಿಂಬಾಳ ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಪುಷ್ಪಲತಾ ಸ್ವಾಗತಿಸಿ ದುರ್ಗಾವತಿ ವಂದಿಸಿದರು.
ಸುಗುಣ ಕಾರ್ಯಕ್ರಮ ನಿರೂಪಿಸಿದರು.
ವಲಯದ ಸಂರಕ್ಷಣಾ ವೇದಿಕೆಯ 83ಜನ ಪಧಾದಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಮಾಹಿತಿ ಪಡೆದುಕೊಂಡರು.

Digiqole Ad

ಈ ಸುದ್ದಿಗಳನ್ನೂ ಓದಿ