ದೇವಸ್ಥಾನದಲ್ಲಿ ಘಂಟೆ ಬಾರಿಸುವುದರ ಹಿಂದಿರುವ ನೈಜ ಸಂಗತಿಗಳೇನು?
ದೇವಸ್ಥಾನದಲ್ಲಿ ಘಂಟೆ ಬಾರಿಸುವುದರ ಹಿಂದಿರುವ ನೈಜ ಸಂಗತಿಗಳೇನು?
ಧಾರ್ಮಿಕ : ಶ್ಲೋಕಗಳ ಪ್ರಕಾರ ಘಂಟಾನಾದ ಮಾಡುವದದಿಂದ ಆ ಸುತ್ತಲಿನ ಸ್ಥಳದಲ್ಲಿರುವ ದುಷ್ಟ (ರಕ್ಕಸ) ಶಕ್ತಿಗಳಿಗೆ ಅಲ್ಲಿಂದ ಹೋಗಲು ನಾವು ಸಂಕೇತಿಸುತ್ತೇವೆ (ಗಮನಾರ್ಥಂ ತು ರಾಕ್ಷಸಾ). ಬರೀ ದೇವಸ್ಥಾನದಲ್ಲಿ ಮಾತ್ರವಲ್ಲ, ದಿನನಿತ್ಯ ದೇವರ ಪೂಜೆ ಪ್ರಾರಂಭಿಸುವ ಮೊದಲು ಕೂಡ ಘಂಟಾನಾದ ಮಾಡಿ ದುಷ್ಟ ಶಕ್ತಿಗಳನ್ನು ಓಡಿಸಿ ನಂತರ ಪೂಜಾಕರ್ಮಗಳನ್ನು ಮಾಡುವ ಪದ್ಧತಿ ಇದೆ.
ವೈಜ್ಞಾನಿಕ : ಘಂಟೆಯನ್ನು ಒಂದು ವಿಶಿಷ್ಟವಾದ ಮಿಶ್ರಲೋಹದಿಂದ ತಯಾರಿಸುತ್ತಾರೆ. ಇದಕ್ಕೆ ಘಂಟಾಲೋಹವೆಂದೇ ಹೆಸರು. ಈ ಮಿಶ್ರಲೋಹ, ಮತ್ತು ಘಂಟೆಯ ಬಟ್ಟಲಿನ ಆಕೃತಿ, ಇವೆರಡೂ ಸೇರಿದಾಗ ಅತ್ಯಂತ ಹೆಚ್ಚು ಕಂಪನವುಳ್ಳ ಶಬ್ದ ತರಂಗವನ್ನುಂಟುಮಾಡಬಲ್ಲವಾಗಿವೆ. ಘಂಟೆಯನ್ನು ಬಾರಿಸಿದ ನಂತರವು ಆ ಬಟ್ಟಲು ಹೆಚ್ಚುಹೊತ್ತು (ಕ್ಷಣಗಳು) ಕಂಪಿಸುತ್ತಿದ್ದು ಶಬ್ದ ತರಂಗಗಳನ್ನು ಹೊರಡಿಸುತ್ತಲೇ ಇರುತ್ತದೆ. ಹೀಗಾಗಿ ಕೇಳುಗರಿಗೆ ಉಳಿದ ಲೋಹದ ಆಕೃತಿಗಿಂತ ಇದರಿಂದ ಹೆಚ್ಚಿನ ಶಬ್ದ ಉತ್ಪತ್ತಿಯಾದಂತೆ ಎನಿಸುತ್ತದೆ. ಅದೂ ಮಾತ್ರವಲ್ಲದೆವೈಜ್ಞಾನಿಕವಾಗಿ ಹೇಳುವುದಾದರೆ ದೇವಾಲಯದ ದೊಡ್ಡ ಘಂಟೆಗಳು ಸಾಮಾನ್ಯವಾಗಿ ಕ್ಯಾಡ್ಮಿಯಮ್, ಸೀಸ, ತಾಮ್ರ, ಸತು, ನಿಕಲ್, ಕ್ರೋಮಿಯಂ ಮತ್ತು ಮ್ಯಾಂಗನೀಸ್‍ಗಳನ್ನು ಒಳಗೊಂಡಿರುತ್ತದೆ. ಈ ಲೋಹಗಳ ಮಿಶ್ರಣದಲ್ಲಿ ತಯಾರಾದ ಘಂಟೆಗಳನ್ನು ಬಾರಿಸಿದಾಗ ನಮ್ಮ ಎಡ ಮತ್ತು ಬಲ ಮೆದುಳಿನ ಮೇಲೆ ಏಕತೆಯನ್ನು ಉಂಟುಮಾಡುತ್ತವೆ.
ತಾರ್ಕಿಕ : ಹಿಂದಿನ ಕಾಲದಲ್ಲಿ (ಜನಸಾಂದ್ರತೆ ಕಡಿಮೆ ಇದ್ದಾಗ, ಬರಿದಾದ ದೇವಸ್ಥಾನಗಳಿದ್ದಾಗ) ಗರ್ಭಗುಡಿಗಳಲ್ಲಿ ಪ್ರಾಣಿ ಜಂತುಗಳೇನಾದರೂ (ಇಲಿ, ಹಾವು) ಇದ್ದಲ್ಲಿ, ನೀವು ಮೊದಲು ಘಂಟೆಯನ್ನು ಜೋರಾಗಿ ಬಾರಿಸಿ, ಅವುಗಳು ಅಲ್ಲಿಂದ ಹೋದ ಮೇಲೆ ನೀವು ಗರ್ಭಗುಡಿಗೆ ಹೋಗಬೇಕೆಂಬ ‘ಸುರಕ್ಷತೆಯ’ ದೃಷ್ಟಿಯಿಂದ ಮಾಡಿರಬಹುದಾದ ಪದ್ಧತಿಯೂ ಇರಬಹುದು ಎನಿಸುತ್ತದೆ.(ಕೃಪೆ:M.k)