ಕಡಬ: ದೊಡ್ಡಕೊಪ್ಪ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಕ್ರಮ…
ಕಡಬ: ದೊಡ್ಡಕೊಪ್ಪ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಕ್ರಮ…
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಡಬ ವಲಯದ ದೊಡ್ಡಕೊಪ್ಪ ಜ್ಞಾನದೀಪಾ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಗಳ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಾಗಾರವು ಮೂರಾಜೆ ಕೊಪ್ಪ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಸಂಧ್ಯಾ ರವರು ಮತನಾಡಿ ಮಾನವನ ದಿನನಿತ್ಯದ ಜೀವನ ಶೈಲಿಯಲ್ಲಿ ದುಡಿಮೆಗೆ ಹಾಗೂ ಹಣ ಸಂಪಾದನೆಗೆ ಹೆಚ್ಚು ಸಮಯವನ್ನು ಕಳೆಯುವ ಯಾಂತ್ರಿಕ ಬದುಕಿನ ಸಂದರ್ಭದಲ್ಲಿ ತಮ್ಮ ಆರೋಗ್ಶ ಕಾಪಾಡುವಲ್ಲಿ ಕಾಳಜಿ ವಹಿಸುವುದು ಕಡಿಮೆಯಾಗಿರುತ್ತದೆ. ಇದರಿಂದ ಶರೀರದ ಸಾಮರ್ಥ್ಯ ಕುಗ್ಗಿಹೋಗುವುದರೊಂದಿಗೆ ಜೀವಿತ ಅವಧಿಯೂ ಕಡಿಮೆಯಾಗುತ್ತದೆ. ಹೊಟೇಲ್ ಹಾಗೂ ಬೀದಿ ಬದಿಯ ಅಂಗಡಿಗಳಲ್ಲಿ ಸಿಗುವ ಬಾಯಿಗೆ ರುಚಿ ನೀಡುವ ರಾಸಾಯನಿಕ ಮಿಶ್ರಿತ ಆಹಾರಗಳ ಸೇವನೆಯಿಂದ ಅನೇಕ ರೋಗಗಳಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕಾದ ಸಂದಿಗ್ದ ಪರಿಸ್ಥಿತಿ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ.
ತಮ್ಮ ಜೀವನದಲ್ಲಿ ಆರೋಗ್ಯಕರವಾದ ಚಟುವಟಿಕೆಯಿಂದ ಕೂಡಿದ ಬದುಕು ನಡೆಸಲು ಪೌಷ್ಟಿಕತೆ ತುಂಬಿದ ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳಿಂದ ಮನೆಯಲ್ಲಿಯೇ ತಯಾರಿಸಿದ ಔಷದಿಯ ಗುಣಗಳನ್ನು ಹೊಂದಿರುವ ಆಹಾರ ಸೇವಿಸುವುದನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು. ಆಹಾರವನ್ನು ಔಷಧಿಯಾಗಿ ಸೇವನೆ ಮಾಡಬೇಕು.ಔಷಧಿ ಯನ್ನು ಆಹಾರವಾಗಿ ಸೇವಿಸಬಾರದು ಎಂದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಚೇತನ ಕಾರ್ಯಕ್ರಮ ಉದ್ದೇಶ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದ ಬಗ್ಗೆ ಮಾಹಿತಿ ನೀಡಿದರು.ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆಯವರು ಮಳೆಗಾಲದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಆರೋಗ್ಶ ರಕ್ಷಣೆ, ಮನೆಯ ಮಕ್ಕಳನ್ನು ಮಳೆಗಾಲದಲ್ಲಿ ಜಾಗರೂಕರಾಗಿಸುವ ಕುರಿತಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿನಾಯಕ ಸಂಘದ ವಸಂತಿ ರವರು ವಹಿಸಿದ್ದರು.ಸೇವಾಪ್ರತಿನಿಧಿ ಸರಿತಾರವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.ಕೇಂದ್ರದ ಸದಸ್ಯರಿಂದ ತಯಾರಿಸಲಾದ ಹದಿನೇಳು ವಿಧದ ಪೌಷ್ಟಿಕ ಖಾದ್ಯಗಳ ಪ್ರದರ್ಶನ ಹಾಗೂ ತಯಾರಿಸುವ ವಿಧಾನಗಳ ಕುರಿತಾಗಿ ಕಾರ್ಯಾಗಾರ ನಡೆಸಿ ಬಹುಮಾನ ವಿತರಿಸಲಾಯಿತು.ಕೇಂದ್ರದ ಸದಸ್ಯೆ ಮೀನಾಕ್ಷಿ ಎಂ. ಎಸ್, ರವರು ಸ್ವಾಗತಿಸಿ ಲತಾ. ಕೆ ,ಯವರು ವಂದಿಸಿದರು.ಕೇಂದ್ರದ ಸಂಯೋಜಕಿ ಬೆಂದಿನಿ ಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು.
Srikshetra Dharamsthal Village Development Project, Doddakoppa Jnandeepa Gnanivikas Kendra, Kadaba Zone, Nutritional Food Exhibition and Information Workshop was held at Mooraje Koppa Primary School.
Community Health Center health assistant Sandhya, who participated as a resource person in the program, said that in the daily life style of Matanadi people spend more time working and earning money in the mechanical life, they are less concerned about maintaining their health. Due to this, the body’s capacity shrinks and the life span also decreases. It is inevitable for everyone that they have to devote themselves to many diseases due to the consumption of mouth-watering chemical-mixed foods available in hotels and street shops.Everyone should make it a habit to eat home-made medicinal foods made from naturally available herbs that are packed with nutrients to lead a healthy and active life in their lives. He said that food should be consumed as medicine. Medicine should not be consumed as food.Taluk Gyan Vikasa Co-ordinator Mrs. Chetana gave information about the purpose of the program and Matrusree Hemavathy Amma’s wish.Zonal Supervisor Raviprasad Alaje spoke about the precautions to be taken during the rainy season and health protection, and making the children of the house careful during the rainy season.Vasanthi of Sri Vinayaka Sangha presided over the program.Service Representative Sarita was present on the stage.Seventeen types of nutritious dishes prepared by the members of the center were presented and a workshop was held on preparation methods and prizes weredistributed.Member of the Center Meenakshi M. Welcomed by S, Lata. K thanked Bendini Krishna, coordinator of the center, presented the program.