• 18 ಮಾರ್ಚ್ 2025

ಕಂಬಳ ಕ್ಷೇತ್ರಗಳಲ್ಲಿ ಭಾರೀ ಹೆಸರು ಮಾಡಿದ್ದ ‘ಲಕ್ಕಿ’ ಕೋಣ ಇನ್ನು ನೆನಪು ಮಾತ್ರ!

 ಕಂಬಳ ಕ್ಷೇತ್ರಗಳಲ್ಲಿ ಭಾರೀ ಹೆಸರು ಮಾಡಿದ್ದ ‘ಲಕ್ಕಿ’ ಕೋಣ ಇನ್ನು ನೆನಪು ಮಾತ್ರ!
Digiqole Ad

ಕಂಬಳ ಕ್ಷೇತ್ರಗಳಲ್ಲಿ ಭಾರೀ ಹೆಸರು ಮಾಡಿದ್ದ ‘ಲಕ್ಕಿ’ ಕೋಣ ಇನ್ನು ನೆನಪು ಮಾತ್ರ!

ಮಂಗಳೂರು: ಕಂಬಳ ಕ್ಷೇತ್ರಗಳಲ್ಲಿ ಭಾರೀ ಹೆಸರು ಮಾಡಿದ್ದ ‘ಲಕ್ಕಿ’ ಕೋಣ ಕೊನೆಯುಸಿರೆಳೆದಿದೆ. ವರಪಾಡಿ ಬಡಗುಮನೆ ದಿವಾಕರ ಚೌಟರು ಸಾಕಿದ್ದ ಈ ಕೋಣ ಕಳೆದ ಕೆಲವು ದಿನಗಳಿಂದ ಉದರ ಸಂಬಂಧಿ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿತ್ತು. ಇದೀಗ ಈ ಕೋಣ ನಿಧನ ಹೊಂದಿರುವುದು ಕಂಬಳ ಅಭಿಮಾನಿಗಳಿಗೆ ಅತೀವ ದುಃಖ ತಂದಿದೆ.

ಜೂನಿಯರ್ ವಿಭಾಗದಲ್ಲಿ ಕಂಬಳ ಓಟ ಆರಂಭಿಸಿದ್ದ ಲಕ್ಕಿ ಸೀನಿಯ‌ರ್ ಆದ ತಕ್ಷಣ ತನ್ನ ಸಾಧನೆಯ ಮೈಲಿಗಲ್ಲು ಆರಂಭಿಸಿತ್ತು. 2023-24ರ ಸೀಸನ್‌ನಲ್ಲಿ ದೊಡ್ಡ ಹೆಸರು ಮಾಡಿ ಪದಕಮಾಲೆಗೆ ಕೊರಳೊಡ್ಡಿದ್ದ ಲಕ್ಕಿ ಭವಿಷ್ಯದ ದೊಡ್ಡ ಸ್ಟಾರ್ ಆಗುವ ಎಲ್ಲಾ ಸೂಚನೆ ನೀಡಿತ್ತು. ಕಳೆದ ಮೂರು ವರ್ಷಗಳಿಂದ ಜೋಡುಕರೆ ಕಂಬಳದಲ್ಲಿ ಭಾಗವಹಿಸುತ್ತಿದ್ದ ಲಕ್ಕಿ ಸುಮಾರು 12ಪದಕಗಳನ್ನು ಗೆದ್ದುಕೊಂಡಿದೆ.ಇನ್ನು ಬೆಂಗಳೂರಿನಲ್ಲಿ  ಪ್ರಪ್ರಥಮ ಬಾರಿಗೆ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಲಕ್ಕಿ 2ನೇ ಬಹುಮಾನ ಪಡೆದಿತ್ತು. ಕಳೆದ ಸೀಸನ್‌ನ ಕಕ್ಕೆಪದವು, ಬೆಂಗಳೂರು, ನರಿಂಗಾನ, ಐಕಳ ಮತ್ತು ಜಪ್ಪು ಸೇರಿದಂತೆ ಐದು ಕಂಬಳಗಳಲ್ಲಿ ಈ ಕೋಣ ಮೆಡಲ್ ಪಡೆದಿತ್ತು.ಎರಡು ವರ್ಷದ ಸಾಂಪ್ರದಾಯಿಕ ಕಂಬಳಗಳಲ್ಲಿ ಓಡಿದ್ದ ಲಕ್ಕಿ ಹಲವು ಪ್ರಶಸ್ತಿ ಗೆದ್ದುಕೊಂಡಿತ್ತು. 2021-22ರ ಮೂಡಬಿದಿರೆಯ ಕೋಟಿ ಚೆನ್ನಯ ಕಂಬಳದಲ್ಲಿ ತೆಗ್ಗರ್ಸೆ ಪಾಂಡೂ ಜೊತೆಗೂಡಿದ ಲಕ್ಕಿ ಮೊದಲ ಬಾರಿಗೆ ಜೋಡುಕರೆ ಕಂಬಳದ ಪ್ರಶಸ್ತಿ ಗೆದ್ದುಕೊಂಡಿತ್ತು. ಆ ಸೀಸನ್ ನಲ್ಲಿ ಬಳಿಕ ಅದೇ ಜೋಡಿ ಮಿಯ್ಯಾರು ಮತ್ತು ಬಾರಾಡಿ ಕಂಬಳದಲ್ಲಿ ಪ್ರಶಸ್ತಿ ಬಾಚಿತ್ತು. 2022-23 ಸೀಸನ್ ನಲ್ಲಿ ಭಟ್ಕಳ ಪವನ್ ಜತೆಯಾಗಿ ಎರಡು ಮತ್ತು ನಾವುಂದ ಪುಟ್ಟ ಜತೆಯಾಗಿ ಎರಡು ಮೆಡಲ್ ಗೆದ್ದುಕೊಂಡಿತ್ತು. ಇದೇ ಸೀಸನ್ ಕೊನೆಗೆ ವರಪಾಡಿ ಬಡಗುಮನೆ ದಿವಾಕರ ಚೌಟರು ಲಕ್ಕಿಯನ್ನು ಖರೀದಿ ಮಾಡಿದ್ದರು.ಇದೀಗ ಹಲವು ಮಂದಿ ಆಗಮಿಸಿ ಲಕ್ಕಿಯ ಅಂತಿಮ ದರ್ಶನ ಪಡೆದರು.

Digiqole Ad

ಈ ಸುದ್ದಿಗಳನ್ನೂ ಓದಿ