ಆರ್ ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರ್ ವತಿಯಿಂದ ಸುರೇಶ್ ಕುಮಾರ್ ಜಿ ಚಾರ್ವಾಕ ಇವರಿಗೆ ಸಾಹಿತ್ಯ ಕಿರಣ ಪ್ರಶಸ್ತಿ ನೀಡಲಾಯಿತು.
ಆರ್ ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರ್ ವತಿಯಿಂದ ಸುರೇಶ್ ಕುಮಾರ್ ಜಿ ಚಾರ್ವಾಕ ಇವರಿಗೆ ಸಾಹಿತ್ಯ ಕಿರಣ ಪ್ರಶಸ್ತಿ ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಚಾರ್ವಾಕ ಗ್ರಾಮದ ಪಾಲ್ತಿಲ್ಲ ಶ್ರೀಯುತ ಕುಮಾರ್ ಮತ್ತು ಶ್ರೀಮತಿ ಸರೋಜಿನಿ ಇವರ ಪುತ್ರ ಇವರ ಆಸಕ್ತಿಗಳು ಗಾಯನ ,ಸಾಹಿತ್ಯ ಮತ್ತು ಹಲವಾರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಹಲವಾರು ಪ್ರಶಸ್ತಿಗಳು ಮುಡಿಗೇರಿಸಿಕೊಂಡಿರುತ್ತಾರೆ. ಇವರ ಕಲಾ ಸೇವೆಯನ್ನು ಪರಿಗಣಿಸಿ ಇವರಿಗೆ ಆರ್. ಪಿ ಕಲಾ ಸೇವಾ ಟ್ರಸ್ಟ್ ವತಿಯಿಂದ ಸಾಹಿತ್ಯ ಕಿರಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.