ರಾತ್ರೋರಾತ್ರಿ ಠಾಣೆಗೆ ಧಾವಿಸಿದ ಪುತ್ತಿಲ!
ರಾತ್ರೋರಾತ್ರಿ ಠಾಣೆಗೆ ಧಾವಿಸಿದ ಪುತ್ತಿಲ
ಜು.21: ಹಿಂದೂ ಯುವತಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿದ ರಹಿಮಾನ್ ಎಂಬಾತನ ಸ್ಥಳೀಯರು ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಜು.21ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಮಾಡುತ್ತಿದ್ದ ರಹಿಮಾನ್ ನನ್ನು ಸ್ಥಳೀಯರು ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ ಅರುಣ್ ಕುಮಾರ್ ಪುತ್ತಿಲ, ಆರೋಪಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪುತ್ತಿಲ ಪರಿವಾರ ಸಿಸಿಟಿವಿಗೆ ಒತ್ತಾಯ: ಈಗಾಗಲೇ ಉಪ್ಪಿನಂಗಡಿಯಲ್ಲಿ ಹಿಂದೂಗಳನ್ನು ಕೇಂದ್ರೀಕರಿಸಿ ಹಲವು ಘಟನೆಗಳು ನಡೆದಿದ್ದು, 2ವರ್ಷದ ಹಿಂದೆ ಮೀನು ಅಂಗಡಿಗೆ ಬೆಂಕಿ ಹಾಕಿದ್ದು ಇನ್ನೂ ಪತ್ತೆಯಾಗಿಲ್ಲ. ಈ ಘಟನೆಯಲ್ಲಿ ಆರೋಪಿಯನ್ನು ಊರವರೇ ಹಿಡಿದುಕೊಟ್ಟಿದ್ದಾರೆ. ಪೆರಿಯಡ್ಕ ಜಂಕ್ವನ್ ನಲ್ಲಿ ಪೊಲೀಸ್ ಇಲಾಖೆಯ ಸಿಸಿಟಿವಿ ಅಗತ್ಯತೆ ಇದೆ ಎಂದು ಠಾಣಾಧಿಕಾರಿಯಲ್ಲಿ ಮನವಿ ಮಾಡಿದರು.