ಬೆಳಂದೂರು ಬಿಜೆಪಿ ಬೂತ್ 73ರ ಸಮಿತಿ ಸಭೆ-ಪದಾಧಿಕಾರಿಗಳ ಆಯ್ಕೆ.
ಬೆಳಂದೂರು ಬಿಜೆಪಿ ಬೂತ್ 73ರ ಸಮಿತಿ ಸಭೆ-ಪದಾಧಿಕಾರಿಗಳ ಆಯ್ಕೆ.
ಕಾಣಿಯೂರು: ಭಾರತೀಯ ಜನತಾ ಪಾರ್ಟಿ ಬೆಳಂದೂರು ವಾರ್ಡ್ 2 ಬೂತ್ 73ರ ಸಭೆಯು ಬೂತ್ ಅಧ್ಯಕ್ಷರಾದ ಚಂಪಾ ಕುಶಾಲಪ್ಪ ಗೌಡರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಬೂತ್ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟು ಪಕ್ಷದ ಸಂಘಟನಾ ಕಾರ್ಯಗಳ ಬಗ್ಗೆ ಮಂಡಲ ಸಮಿತಿಯ ಕಾರ್ಯದರ್ಶಿ ಗಣೇಶ್ ಉದನಡ್ಕ ಮಾತನಾಡಿದರು.
ಬೆಳಂದೂರು ಗ್ರಾಮದ ವಾರ್ಡ್ 2 ಬೂತ್ ಸಂಖ್ಯೆ 73 ರ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾಗಿ ಚಂದ್ರಯ್ಯ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ ಅಬೀರ, ಮತಗಟ್ಟೆ ಏಜೆಂಟ್ ಪ್ರಮೋದ್ ನೀರಜರಿ,ಬಿ.ಎಲ್.ಎ 2 ಜಯಂತ ಅಬೀರ, ಮಹಿಳಾ ಸದಸ್ಯೆ ಚಂಪಾ ಅಬೀರ, ಎಸ್.ಸಿ ಪ್ರಮುಖ್ ಬಾಬು ಮಾದೋಡಿ, ಎಸ್.ಟಿ ಪ್ರಮುಖ್ ಗೌರಿ ಗಿರಿಯಪ್ಪ ಮಾದೋಡಿ,ಒ.ಬಿ.ಸಿ ಪ್ರಮುಖ್ ಜನಾರ್ದನ ಆಚಾರ್ಯ, ಸದಸ್ಯರುಗಳಾಗಿ ಉದಯ ರೈ ಮಾದೋಡಿ, ಪ್ರಮೀಳಾ ಜನಾರ್ದನ, ಪ್ರೀತಂ ಕಂಡೂರು, ದಿನೇಶ್ ಕೆಳಗಿನ ಮನೆ,ಸುಂದರ ಕಂಡೂರು,ಶ್ರೀನಿತ್ ಅಬೀರ, ಸಂತೋಷ್ ಅಬೀರ ಇವರುಗಳನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಬೆಳಂದೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಜಯಂತ ಅಬೀರ ಉಪಸ್ಥಿತರಿದ್ದರು.ಚಂಪಾ ಕುಶಾಲಪ್ಪ ಸ್ವಾಗತಿಸಿ ಶೇಖರ ಅಬೀರ ವಂದಿಸಿದರು