• 7 ಡಿಸೆಂಬರ್ 2024

ಸಾಂದೀಪನಿಯಲ್ಲಿ ಗುರು ಪೂರ್ಣಿಮೆ.

 ಸಾಂದೀಪನಿಯಲ್ಲಿ ಗುರು ಪೂರ್ಣಿಮೆ.
Digiqole Ad

ಸಾಂದೀಪನಿಯಲ್ಲಿ ಗುರು ಪೂರ್ಣಿಮೆ.

ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ, ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್, ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ, ಸದಸ್ಯರಾದ ಶ್ರೀ ಪ್ರಸನ್ನ ಭಟ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲಾ ವಿಎನ್ ಶಿಕ್ಷಕ ಶಿಕ್ಷಕೇತರ ವೃoದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳೊಂದಿಗೆ ಗುರು ಪೂರ್ಣಿಮೆಯ ವಿಶೇಷತೆಯನ್ನು ತಿಳಿಸುತ್ತಾ ಎಲ್ಲರನ್ನೂ ಆದರದಿಂದ ಸ್ವಾಗತಿಸಿದರು. ಅಧ್ಯಕ್ಷರಾದ ಶ್ರೀಯುತ ಜಯರಾಮ ಕೆದಿಲಾಯ ಶಿಬರ ರವರು ಮಾತನಾಡುತ್ತಾ ವೇದವ್ಯಾಸರ ಜನ್ಮದಿನವನ್ನು ಗುರುಪೂರ್ಣಿಮ ದಿನವಾಗಿ ಆಚರಿಸುತ್ತೇವೆ. ವೇದವ್ಯಾಸರು ಸಾವಿರಾರು ವರ್ಷಗಳ ಜ್ಞಾನವನ್ನು ದಾಖಲಿಸಿ ವೇದಾಪುರಾಣಗಳ ಮೂಲಕ ಜ್ಞಾನ ವನ್ನು ನೀಡಿದರು. ಎಷ್ಟರವರೆಗೆ ಜ್ಞಾನದ ದಾಹವಿರುತ್ತದೋ ಅಷ್ಟರವರೆಗೆ ನಾವು ಶಿಷ್ಯರಾಗಿರುತ್ತೇವೆ ಪ್ರಕೃತಿ ನಮಗೆ ಗುರುವಾಗಿರುತ್ತದೆ. ಬದುಕಿನುದ್ದಕ್ಕೂ ಇತರರ ಕ್ಷೇಮಕ್ಕೆ ಪ್ರಯತ್ನಿಸಬೇಕು ಎಂದು ಮಕ್ಕಳಿಗೆ ಸ್ಪೂರ್ತಿಯ ಮಾತುಗಳನ್ನಾಡಿ ಗುರುಪೂರ್ಣಿಮೆಯ ಶುಭಾಶಯ ತಿಳಿಸಿದರು. ನಂತರ ಜಗದ್ಗುರುಗಳಾದ ಶ್ರೀ ವೇದವ್ಯಾಸ ಮಹರ್ಷಿಗಳ ಭಾವಚಿತ್ರಕ್ಕೆ ಎಲ್ಲರಿಂದ ಪುಷ್ಪಾರ್ಚನೆ ಗಯ್ಯಲಾಯಿತು. ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ನಂತರ ಪ್ರಸಾದ ವಿತರಿಸಲಾಯಿತು. ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರವಿಶಂಕರ್ ರವರು ಧನ್ಯವಾದ ಗೈದರು.

 

Digiqole Ad

ಈ ಸುದ್ದಿಗಳನ್ನೂ ಓದಿ