ಕಾರ್ಗಿಲ್ 25ನೇ ವಿಜಯ ದಿನ, ದೇಶಕ್ಕಾಗಿ ಬಲಿದಾನಗೈದ ವೀರ ಯೋಧರಿಗೆ ಪ್ರಧಾನಿ ನಮನ.
ಕಾರ್ಗಿಲ್ 25ನೇ ವಿಜಯ ದಿನ, ದೇಶಕ್ಕಾಗಿ ಬಲಿದಾನಗೈದ ವೀರ ಯೋಧರಿಗೆ ಪ್ರಧಾನಿ ನಮನ.
ಭಾರತ ಹೆಮ್ಮೆಯ ಯೋಧರು 1999ರಂದು ನಡೆದ ಕಾರ್ಗಿಲ್ ಯುದ್ದ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಜು.26 ಸ್ಮರಿಸುವ ದಿನ. ಕಾರ್ಗಿಲ್ ಯುದ್ಧ ನಡೆದು ಇಂದಿಗೆ 25ವರ್ಷಗಳಾಗಿದೆ. ಈ ಯುದ್ಧದಲ್ಲಿ 527 ಸೈನಿಕರು ಹುತಾತ್ಮರಾಗಿದ್ದು ಅವರ ಬಲಿದಾನ ಸ್ಮರಿಸಲಾಗುತ್ತಿದೆ. ದೇಶಕ್ಕಾಗಿ ಬಲಿದಾನಗೈದ ಯೋಧರಿಗೆ ಗೌರವಾರ್ಪಣೆ ಯ ಸಲ್ಲಿಸುವ ದಿನ . ಪ್ರಧಾನಿ ಮೋದಿ ಅವರು ಲಡಾಕ್‌ನ ಡ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ವೀರ ಮರಣ ಹೊಂದಿರುವ ಸೈನಿಕರಿಗೆ ನಮನ ಸಲ್ಲಿಸಲಾಯಿತು. ಪ್ರಧಾನಿ ಭದ್ರತಾ ಸುರಕ್ಷೆಗೆ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಭದ್ರತಾ ಉದ್ದೇಶಗಳಿಗೆ ಅನುಗುಣವಾಗಿ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರಪತಿ ದ್ರಪದಿ ಮುರ್ಮು ಹಾಗು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಾಯಕರು ಸಹ ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಭಾವಪೂರ್ಣ ಶ್ರದ್ಧಂಜಲಿ ಅರ್ಪಿಸಿದರು .