• 24 ಮಾರ್ಚ್ 2025

ಮರ್ದಾಳ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ.

 ಮರ್ದಾಳ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ.
Digiqole Ad

ಮರ್ದಾಳ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ) ಕಡಬ ತಾಲೂಕು,ಬಿಳಿನೆಲೆ ವಲಯ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು, ಬಿಳಿನೆಲೆ ವಲಯ ಇವುಗಳ ಆಶ್ರಯದಲ್ಲಿ ಸೈoಟ್ ಮೇರಿಸ್ ಪ್ರೌಢಶಾಲೆ ಮರ್ದಾಳದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ಈಶೋಫಿಲಿಫ್ ಮುಖ್ಯಗುರುಗಳು ಸೈoಟ್ ಮೇರಿಸ್ ಪ್ರೌಢಶಾಲೆ ಮರ್ಧಾಳ ರವರು ಮಾಡಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀಯುತ ಗಣೇಶ್ ಕೈಕುರೆ, ಬಿಳಿನೆಲೆ ವಲಯ ಜನ ಜಾಗೃತಿ ವೇದಿಕೆಯ ಸದಸ್ಯರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ, ಶ್ರೀಯುತ ಸಂತೋಷ್ ಕೇನ್ಯ, ಅಧ್ಯಕ್ಷರು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಕಡಬ ತಾಲೂಕು ಶ್ರೀಯುತ ವಿನಯ ಗುರಿಯಡ್ಕ, ಅಧ್ಯಕ್ಷರು 102 ನೆಕ್ಕಿಲಾಡಿ ಒಕ್ಕೂಟ
ಹಾಗೂ ಶ್ರೀಯುತ ಸತೀಶ್ಚಂದ್ರ ರೈ ಅಧ್ಯಕ್ಷರು ಬಂಟ್ರ ಒಕ್ಕೂಟ ರವರು ಬಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ದಿನೇಶ್ ಕುಂದರ್, ಸಹ ಶಿಕ್ಷಕರು ಗೋಪಾಲಕೃಷ್ಣ ಪ್ರೌಢ ಶಾಲೆ ಬಿಳಿನೆಲೆ,ಇವರು ಮಾಹಿತಿ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮಕ್ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಬಿಳಿನೆಲೆ ವಲಯ ಮೇಲ್ವೀಚಾರಕರಾದ ಶ್ರೀ ಆನಂದ ಡಿ.ಬಿ ರವರು ಸ್ವಾಗತಿಸಿದರು
ಸೇವಾ ಪ್ರತಿನಿಧಿ ದಿನೇಶ್ ರವರು ವಂದನಾರ್ಪಣೆಗೈದರು
ಕಾರ್ಯಕ್ರಮಕ್ಕೆ ಸೇವಾಪ್ರತಿನಿದಿಗಳಾದ ಗಣೇಶ್ ಬಿ, ಶ್ರೀಮತಿ ಜ್ಞಾನಸೆಲ್ವಿ,ಶ್ರೀಮತಿ ಬೇಬಿ ಹಾಗೂ ಶ್ರೀಮತಿ ರೇಖಾರವರು ಸಹಕರಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ