ಸಕಲೇಶಪುರ ಭೂಕುಸಿತ: 15 ದಿನಗಳ ಕಾಲ ರೈಲು ಸ್ಥಗಿತ.
ಸಕಲೇಶಪುರ ಭೂಕುಸಿತ: 15 ದಿನಗಳ ಕಾಲ ರೈಲು ಸ್ಥಗಿತ.
ಸಕಲೇಶಪುರ :ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಡಗರವಳ್ಳಿ – ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿರುವ ಪರಿಣಾಮವಾಗಿ ಬೆಂಗಳೂರು – ಮಂಗಳೂರು ಮಾರ್ಗವಾಗಿ ಚಲಿಸುವ 8 ರೈಲುಗಳ ಸಂಚಾರ ಸ್ಥಗಿತವಾಗಿದೆ. ಶಿರಾಡಿ ಘಾಟ್ ನ ಎಡಕುಮೇರಿ ಕಡಗರವಳ್ಳಿಯ ಮಧ್ಯ ಭಾಗದಲ್ಲಿ ಭೂಕುಸಿತದಿಂದಾಗಿ 14 ರೈಲುಗಳ ಸಂಚಾರ ಸ್ಥಗಿತವಾಗಿದ್ದು ಸದ್ಯ ಹಳಿ ದುರಸ್ತಿ ಕಾರ್ಯ ಮುಂದುವರೆಸಿದ್ದು, ಹೆಚ್ಚಿನ ಮಳೆಯ ಪರಿಣಾಮ ಕಾಮಗಾರಿಗೆ ವಿಳಂಬವಾಗುತ್ತಿದೆ. ಆದ್ದರಿಂದಾಗಿ ಆಗಸ್ಟ್ 10ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಶನಿವಾರ ಹಾಗೂ ಭಾನುವಾರ ಹಲವು ರೈಲುಗಳ ಸಂಚಾರ ರದ್ದಾಗಿದೆ. ಕೆಲವು ರೈಲುಗಳನ್ನು ಮಾರ್ಗ ಬದಲಾಯಿಸಿ ಕಳುಹಿಸಲಾಗಿದೆ. ಹಳಿಯ ಕೆಳಭಾಗದಲ್ಲಿ ಮಣ್ಣು ಆಳಕ್ಕೆ ಕುಸಿದಿದ್ದು, ರೈಲ್ವೆ ಹಳಿಗೆ ಅಪಾಯ ಎದುರಾದ ಕಾರಣ ರೈಲ್ವೆ ಸಂಚಾರ ನಿಲ್ಲಿಸಲಾಗಿದೆಯೆಂದು ಆಗಿಕಾರಿಗಳು ತಿಳಿಸಿದ್ದಾರೆ.