• 19 ಫೆಬ್ರವರಿ 2025

ಪಳ್ಳತ್ತೂರಿನ ಮರಣಬಾವಿಯ ಕಥೆ!

 ಪಳ್ಳತ್ತೂರಿನ ಮರಣಬಾವಿಯ ಕಥೆ!
Digiqole Ad

ಪಳ್ಳತ್ತೂರಿನ ಮರಣಬಾವಿಯ ಕಥೆ!

ಆದ್ರೆ ಪಳ್ಳತ್ತೂರಿನಿಂದ ಸೀದಾ ಕೊಟ್ಯಾಡಿ ಮಾರ್ಗವಾಗಿ ಬರುವವರಿಗೆ ಮಾರ್ಗ ಮಧ್ಯೆ ಎರಡು ದೊಡ್ಡ ಮರಣಗುಂಡಿ ಸಿಗುತ್ತವೆ ಹಾಗಂತ ಇದು ಹೊಂಡ ಅಂದ ಮಾತ್ರಕ್ಕೆ ಇದು ಮಲ್ಲ ವಿಷಯವಾ ಅಂದರೆ ಸಾಮಾನ್ಯ ವಾಹನ ಚಾಲಕರಿಗೆ ಖಂಡಿತ ಇದು ಮಲ್ಲ ವಿಷಯವೇ,ಇನ್ನು ಕೊಟ್ಯಾಡಿ ಮಾರ್ಗದಿಂದ ವಾಹನ ಚಾಲಕರು ಸ್ವಲ್ಪ ಸ್ಪೀಡ್ ಆಗಿ ಬಂದರೆ ಒಂದನೇ ಹೊಂಡದಲ್ಲಿ ಗಾಡಿ ಹೂತು ಹೋಗುವ ಎಲ್ಲಾ ಸಾಧ್ಯತೆಗಳು ಇವೆ,ಇದಕ್ಕಿಂತ ಸ್ಪೀಡ್ ಎರಡನೇ ಹೊಂಡಕ್ಕೆ ಬಂದರೆ ವಾಹನದ ಚಕ್ರಗಳು ಸ್ಥಿಮಿತ ತಪ್ಪಿ ರಟ್ಟಿದರೆ ಅಲ್ಲಿ ಕೆಳಗೆ ದೊಡ್ಡ ತೋಟ ಇದೆ,ಇನ್ನು ಅದಕ್ಕೇನಾದರೂ ಬಿದ್ದರೆ ಹೇಳುದೆ ಬೇಡ ಕುಂಡೆಗೆ ದೊಡ್ಡ ಸೈಜಿನ ಸ್ಟಿಚ್ ಗ್ಯಾರೆಂಟಿ..
ವಿಷಯಕ್ಕೆ ಬರುವ ,ಇದಕ್ಕೆ ಸಂಭಂದ ಪಟ್ಟ ಅಧಿಕಾರಿಗಳು ಸಾಧ್ಯವಾದಷ್ಟು ಶೀಘ್ರವಾಗಿ ಸಮಸ್ಯೆಗೆ ಪರಿಹಾರ ನೀಡಿ,ರಸ್ತೆಯ ಕಾಮಗಾರಿ ಆರಂಭಿಸಿ,ಎಲ್ಲಾ ಕಾರ್ಯಕ್ಕೂ ಸೆಂಟ್ರಲ್ ಗವರ್ಮೆಂಟ್ ನ್ನು ದೂರ್ಲಿಕ್ಕೆ ಆಗುದಿಲ್ಲ ,ಸಾಧ್ಯವಾದರೆ ಪಂಚಾಯತ್ ಮೆಂಬರ್ ಕೂಡ ಪರಿಹಾರ ಒದಗಿಸಿ ಕೊಡಬಹುದು..
(ವಿ.ಸೂ: ಬೈಕಿನವರು ಈ ದಾರಿಯಾಗಿ ಬರುವಾಗ ಹೆಲ್ಮೆಟ್ ಧರಿಸಿ ಬನ್ನಿ,ಸ್ವಲ್ಪ ಜಾರಿದರೂ ಮಂಡೆ ಶರ್ಬತ್ ಆಗುವ ಎಲ್ಲಾ ಲಕ್ಷಣಗಳು ಇವೆ)

Digiqole Ad

ಈ ಸುದ್ದಿಗಳನ್ನೂ ಓದಿ