• 2 ನವೆಂಬರ್ 2024

ಉಪ್ಪಿನಂಗಡಿ : ನೇತ್ರಾವತಿ-ಕುಮಾರಧಾರ ನದಿಗಳ ಸಂಗಮಕ್ಕೆ ಕ್ಷಣಗಣನೆ

 ಉಪ್ಪಿನಂಗಡಿ : ನೇತ್ರಾವತಿ-ಕುಮಾರಧಾರ ನದಿಗಳ ಸಂಗಮಕ್ಕೆ ಕ್ಷಣಗಣನೆ
Digiqole Ad

ಉಪ್ಪಿನಂಗಡಿ : ನೇತ್ರಾವತಿ-ಕುಮಾರಧಾರ ನದಿಗಳ ಸಂಗಮಕ್ಕೆ ಕ್ಷಣಗಣನೆ

ಕುಮಾರಧಾರ & ನೇತ್ರಾವತಿ ನದಿಗಳು ಉಪ್ಪಿನಂಗಡಿಯಲ್ಲಿ ಇನ್ನು ಕೆಲವೇ ಹೊತ್ತಿನಲ್ಲಿ ಸಂಗಮ ಆಗುವ ನಿರೀಕ್ಷೆಯಿದ್ದು ಈ ಪವಿತ್ರ ಗಳಿಗೆಗೆ ಸಾಕ್ಷಿಯಾಗುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿದ್ದಾರೆ. 2019ರಲ್ಲಿ ಕುಮಾರಧಾರ & ನೇತ್ರಾವತಿ ನದಿಗಳು ಉಪ್ಪಿನಂಗಡಿಯಲ್ಲಿ ಸಂಗಮವಾಗಿತ್ತು. ಆದರೆ 1974ರಲ್ಲಿ ಭೀಕರ ನೆರೆ ಬಂದಿದ್ದು, ಆ ನಂತರದಲ್ಲಿ ಯಾವತ್ತೂ ಆ ಮಟ್ಟಕ್ಕೆ ನೀರು ಬಂದಿರಲಿಲ್ಲ. ಆದರೆ ಈ ಬಾರಿ ಎರಡು ನದಿಗಳ ಸಂಗಮದ ಜತೆಗೆ 50 ವರ್ಷಗಳ ನೆರೆ ಇತಿಹಾಸ ಮರುಕಳಿಸಬಹುದೇ ಎಂಬ ಆತಂಕವೂ ಎದುರಾಗಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ