ವಯನಾಡು ಭೂಕುಸಿತ ದುರಂತದಲ್ಲಿ ಮೃತರ ಸಂಖ್ಯೆ 124ಕ್ಕೆ ಏರಿಕೆ.
ವಯನಾಡು ಭೂಕುಸಿತ ದುರಂತದಲ್ಲಿ ಮೃತರ ಸಂಖ್ಯೆ 124ಕ್ಕೆ ಏರಿಕೆ.
ಕೇರಳ ಚರಿತ್ರೆಯಲ್ಲೇ ನಡೆದಿರುವ ಅತಿದೊಡ್ಡ ಎನ್ನಲಾಗಿರುವ ವಯನಾಡಿನ ಭೂಕುಸಿತ ದುರಂತದಲ್ಲಿ ಇಲ್ಲಿವರೆಗೆ ಮೃತಪಟ್ಟವರ ಸಂಖ್ಯೆ 124ಕ್ಕೆ ಏರಿದೆ. ಈ ನಡುವೆ ಹಲವಾರು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಅವರ ಸಂಬಂಧಿಕರು ಹುಡುಕಾಟ ನಡೆಸುತ್ತಿರುವ ದೃಶ್ಯಗಳು ಮನಕಲಕುವಂತಿವೆ. ಇನ್ನು ಸೇನಾ ಹೆಲಿಕಾಪ್ಟರ್ ಮೂಲಕ ಸಂಪರ್ಕ ಕಡಿದುಕೊಂಡಿದ್ದ ಚೂರಲ್‌ಮಲ & ಮುಂಡೆಕೈನಲ್ಲಿ ಅಪಾಯದಲ್ಲಿ ಸಿಲುಕಿದ್ದ 1000 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಸದ್ಯ ಸೇನಾ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮಣ್ಣಿನಡಿ ಸಿಲುಕಿರುವ ಮೃತದೇಹಗಳ ಶೋಧಾ ಕಾರ್ಯ ಬುಧವಾರ ನಡೆಯಲಿದೆ.