ದೇಲಂಪಾಡಿ ಮಹಾಲಿಂಗ ಪಾಟಾಳಿಯವರ 18ನೆ ವರ್ಷದ ಸ್ಮರಣೆ ಹಾಗೂ ಪುರಸ್ಕಾರ ಪ್ರದಾನ.
ದೇಲಂಪಾಡಿ ಮಹಾಲಿಂಗ ಪಾಟಾಳಿಯವರ 18ನೆ ವರ್ಷದ ಸ್ಮರಣೆ ಹಾಗೂ ಪುರಸ್ಕಾರ ಪ್ರದಾನ.
ದೇಲಂಪಾಡಿ ಯಕ್ಷಗಾನದ ಸಜ್ಜನ ಕಲಾವಿದ, ಅರ್ಥಧಾರಿ, ವೇಷಧಾರಿ-ಕೀರಿಕ್ಕಾಡು ಮಾಸ್ತರರ ಶಿಷ್ಯ ಮಹಾಲಿಂಗ ಪಾಟಾಳಿಯವರ 18ನೇ ವರ್ಷದ ಸಂಸ್ಮರಣೆ ಹಾಗು ದೇಲಂಪಾಡಿ ಮಹಾಲಿಂಗ ಪಾಟಾಳಿ-ಸೀತಮ್ಮ ಸ್ಮೃತಿ ಪುರಸ್ಕಾರ ಪ್ರದಾನವು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಕಾರ್ಯಕ್ರಮ ದಿನಾಂಕ 10.08.2024 ಶನಿವಾರದಂದು ಶ್ರೀ ಗೋಪಾಲಕೃಷ್ಣ ದೇವರ ಪೂಜೆ ಹಾಗೂ ಸಭಾ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ನಾಡಿನ ಹಿರಿಯ ವೈದ್ಯ, ಸಾಹಿತಿ, ಕಲಾವಿದ ಡಾ. ರಮಾನಂದ ಬನಾರಿಯವರಿಗೆ ದೇಲಂಪಾಡಿ ಮಹಾಲಿಂಗ ಪಾಟಾಳಿ-ಸೀತಮ್ಮ ಸ್ಮೃತಿ ಪುರಸ್ಕಾರ ಪ್ರದಾನ ನಡೆಯಲಿರುತ್ತದೆ.
ನಾರಾಯಣ ದೇಲಂಪಾಡಿ, ರಾಮಣ್ಣ ಮಾಸ್ತರ್ ದೇಲಂಪಾಡಿ ನಾರಾಯಣ ತೋರಣಗಂಡಿ, ಎಂ ರಮಾನಂದ ರೈ ದೇಲಂಪಾಡಿ ಅಧ್ಯಕ್ಷರು, ಕಾರ್ಯದರ್ಶಿ ಹಾಗು ಎಲ್ಲಾ ಯಕ್ಷಗಾನ ಕಲಾ ಮಂಡಳಿಯ ಸಮ್ಮುಖದಲ್ಲಿ ಸೀತಾಪಹಾರ-ಜಟಾಯು ಮೋಕ್ಷ ಯಕ್ಷಗಾನ ತಾಳಮದ್ದಳೆಯು ನಡೆಯಲಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.