• 4 ನವೆಂಬರ್ 2024

ಇಂದು ರಾಷ್ಟ್ರೀಯ ಕಲ್ಲಂಗಡಿ ದಿನ.

 ಇಂದು ರಾಷ್ಟ್ರೀಯ ಕಲ್ಲಂಗಡಿ ದಿನ.
Digiqole Ad

ಇಂದು ರಾಷ್ಟ್ರೀಯ ಕಲ್ಲಂಗಡಿ ದಿನ.

ಕಲ್ಲಂಗಡಿ ಹಣ್ಣೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಜಗತ್ತಿನಲ್ಲಿ ರುಚಿಕರವಾದ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಕೂಡ ಒಂದಾಗಿದೆ. ಶೇಕಡ 92 ರಷ್ಟು ನೀರನ್ನು ಹೊಂದಿರುವ, ರಸಭರಿತ, ದಾಹ ನೀಗಿಸುವ, ದೇಹಕ್ಕೆ ತಂಪೆನಿಸುವ ಕಲ್ಲಂಗಡಿ ಹಣ್ಣಿಗೂ ಒಂದು ದಿನವಿದೆ. ಆಗಸ್ಟ್ 3 ರಂದು ‘ರಾಷ್ಟ್ರೀಯ ಕಲ್ಲಂಗಡಿ ದಿನ’ ವನ್ನು ಆಚರಿಸಲಾಗುತ್ತದೆ. ಕಲ್ಲಂಗಡಿ ದಿನವು ತುರ್ಕಮಿನಿಸ್ತಾನದ 24 ಸಾರ್ವಜನಿಕ ರಜಾದಿನಗಳಲ್ಲಿ ಒಂದಾಗಿದೆ. ‘ನ್ಯಾಷನಲ್ ಲೈಬ್ರರಿ ಆಫ್ ಮೆಡಿಸನ್’ ಅವರ ಪ್ರಕಾರ ಈ ಹಣ್ಣಿನ ಅಧಿಕೃತ ಹೆಸರು ‘ಸಿಟ್ರುಲ್ಲಸ್ ಲ್ಯಾನಾಟಸ್’. ಮತ್ತು ಅವರು ಹೀಗೆ ಉಲ್ಲೇಖಿಸುತ್ತಾರೆ “5000 ವರ್ಷಗಳ ಹಿಂದಿನ ಕಲ್ಲಂಗಡಿಗಳ ಪುರಾತತ್ವ ಶಾಸ್ತ್ರದ ಅವಶೇಷಗಳು, ಹೆಚ್ಚಾಗಿ ಬೀಜಗಳು, ಈಶಾನ್ಯ ಆಫ್ರಿಕಾದಲ್ಲಿ ಕಂಡು ಬಂದಿದೆ. ಕನಿಷ್ಠ 4000 ವರ್ಷಗಳ ಹಿಂದಿನ ಈಜಿಪ್ಟಿನ ಸಮಾಧಿಯಲ್ಲಿ ಒಂದು ತಟ್ಟೆಯಲ್ಲಿ ದೊಡ್ಡದಾದ, ಪಟ್ಟೆಯುಳ್ಳ, ಉದ್ದವಾದ ಹಣ್ಣಿನ ಚಿತ್ರ ಕಂಡು ಬಂದಿದೆ”. ಸಸ್ಯಶಾಸ್ತ್ರಜ್ಞರ ಮತ್ತು ಜೀವಶಾಸ್ತ್ರಜ್ಞರ ಪ್ರಕಾರ ಕಲ್ಲಂಗಡಿ ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಬೆಳೆದ ಬಳ್ಳಿಯಾಗಿದೆ. ಅನಂತರ ಅಲ್ಲಿನ ಜನರು ಅದನ್ನು ಬೆಳೆಯಲು ಆರಂಭಿಸಿದರು. 1615 ರಲ್ಲಿ ‘ಕಲ್ಲಂಗಡಿ’ ಎಂಬ ಪದವು ಮೊದಲ ಬಾರಿಗೆ ಇಂಗ್ಲಿಷ್ ನಿಘಂಟುವಿನಲ್ಲಿ ಕಂಡುಬಂದಿತ್ತು. 17ನೇ ಶತಮಾನದಲ್ಲಿ ಇದು ಯುನೈಟೆಡ್ ಸ್ಟೇಟ್ಸ್ ನಾದ್ಯಂತ ಸಾಮಾನ್ಯವಾಗಿ ಬೆಳೆಯುವ ಬೆಳೆಯಾಗಿತ್ತು. ವರದಿಗಳ ಪ್ರಕಾರ ಉತ್ತರ ಕರೋಲಿನದಲ್ಲಿ 37ನೇ ವರ್ಷದ ಕಲ್ಲಂಗಡಿ ಉತ್ಸವವು ಐತಿಹಾಸಿಕ ಪಟ್ಟಣವಾದ ಹರ್ಟ್ ಫೋರ್ಡ್ ಕೌಂಟಿ ಪಟ್ಟಣದಲ್ಲಿ ನಾಲ್ಕು ದಿನಗಳ ಕಾಲ ಅನೇಕ ರೀತಿಯ ಸ್ಪರ್ಧೆಗಳನ್ನೊಳಗೊಂಡು ವಿಜ್ರಂಭಣೆಯಿಂದ ಆಚರಿಸಲಾಗಿತ್ತು. ಇದು ಕಲ್ಲಂಗಡಿ ಹಣ್ಣಿನ ಮಹತ್ವವನ್ನು ತಿಳಿಸುತ್ತದೆ.
ಜಗತ್ತಿನಾದ್ಯಂತ 96 ದೇಶಗಳಲ್ಲಿ, 1200ಕ್ಕೂ ಹೆಚ್ಚು ಕಲ್ಲಂಗಡಿ ಹಣ್ಣಿನ ಪ್ರಭೇದಗಳಿವೆ. ‘ಜರ್ನಲ್ ಆಫ್ ಅಗ್ರಿಕಲ್ಚರ್’ ಅವರ ಪ್ರಕಾರ, ಈ ಹಣ್ಣು ಚೀನಾದಲ್ಲಿ ಕೃಷಿ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ ಮತ್ತು ಈ ಬೆಳೆ ಬೆಳೆಸುವಲ್ಲಿ ಚೀನಾ ದೇಶವು ಅಗ್ರಸ್ಥಾನವನ್ನು ಪಡೆದಿದೆ. ಈ ಹಣ್ಣನ್ನು ಬೆಳೆಯಲು ಸುಮಾರು 90 ದಿನಗಳು ಬೇಕು. ಇದು ಅತಿ ಸುಲಭವಾಗಿ ಬೆಳೆಯುವ ಹಣ್ಣು, ಆದುದರಿಂದ ರೈತರಿಗೆ ಹೆಚ್ಚು ಲಾಭವನ್ನು ತಂದುಕೊಡುತ್ತದೆ. ಜಗತ್ತಿನಾದ್ಯಂತ ಹೆಚ್ಚು ಬೇಡಿಕೆ ಇರುವ ಹಣ್ಣು ಇದಾಗಿದೆ. ಮತ್ತು ಬೇಸಿಗೆ ಕಾಲದಲ್ಲಿ ಈ ಹಣ್ಣಿಗೆ ವಿಶೇಷವಾದ ಬೇಡಿಕೆಯಿರುತ್ತದೆ. ಕೆಂಪು ಕಲ್ಲಂಗಡಿ ಹಣ್ಣನ್ನು ಜನರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ.
ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ C ಮತ್ತು ವಿಟಮಿನ್ A ಇರುತ್ತದೆ. ಇದು ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಮತ್ತು ಉಷ್ಣತೆಯ ನಿಯಂತ್ರಣ, ಜೀವಕೋಶಗಳಿಗೆ ಪೋಷಕಾಂಶಗಳ ವಿತರಣೆ ಮುಂತಾದ ಕಾರ್ಯಗಳನ್ನು ಮಾಡುತ್ತದೆ. ಕಲ್ಲಂಗಡಿಯಲ್ಲಿರುವ ಪೊಟ್ಯಾಷಿಯಂ ಮತ್ತು ಮೆಗ್ನೀಷಿಯಂ ಪ್ರಮಾಣವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ C ಅಸ್ತಮದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಆದುದರಿಂದ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

     ಬರಹ: ಶೇಖರ. ಎಂ ದೇಲಂಪಾಡಿ

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ